ಒಟ್ಟು ನೋಟಗಳು

Wednesday, June 28, 2017

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 48


ಬೆಳೆಯ ಕೊಯ್ಯಲು ಹೇಳಿ ಕುಣಬಿಯ । ಬೆಳೆಯ ಸಾವಿರಪಾಲು ಮಾಡಿದ ।
ಫಲವ ನಲವತ್ತೆಂಟರಲಿ ವರ್ಣಿಸುವ ಪರಿ ಏನು   || 48 ||

ಗುರುಗಳು ಪ್ರತಿನಿತ್ಯ ಸಂಗಮಕ್ಕೆ ಬರುವಾಗ ಒಂದು ಹೊಲದ ಮುಖಾಂತರ ಸಾಗುತ್ತಿದ್ದರು. ಆ ಹೊಲದ ಒಡೆಯ ನಿತ್ಯ ಗುರುಗಳು ಬರುವಾಗ, ಮಧ್ಯಾನ್ಹ ಗಾಣಗಾಪುರಕ್ಕೆ ಹೋಗುವಾಗ ನಮಸ್ಕರಿಸುತ್ತಿದ್ದ. ಹೀಗೆ ಅನೇಕ ದಿನಗಳಾದವು. ಜೋಳದ ತೆನೆ ಹೊರಡುವ ಸಮಯ. ಗುರುಗಳು ರೈತನನ್ನು 'ಏನು ನಿನ್ನ ಆಸೆ. ಏಕೆ ದಿನಾ ನಮಸ್ಕರಿಸುವೆ. ನಿನಗೇನು ಬೇಕು?' ಎಂದಾಗ 'ಗುರುವೇ, ನಿಮ್ಮ ಪಾದ ಧೂಳಿನಿಂದ ಉತ್ತಮ ಬೆಳೆಯಾಗಿದೆ. ನಿಮ್ಮ ಆಶೀರ್ವಾದ ಬೇಕು' ಎನ್ನುತ್ತಾನೆ. ಗುರುಗಳು ತಮಾಷೆ ಮಾಡುತ್ತಾ 'ಉತ್ತಮ ಫಸಲು ಬೇಕಿದ್ದರೆ ನಾನು ಸಂಗಮ ಸ್ನಾನ ತೀರಿಸಿ ಬರುವಲ್ಲಿ ಈ ಬೆಳೆಯನ್ನೆಲ್ಲಾ ಕೊಯ್ದು ಬಿಡು' ಎಂದರು. ಗುತ್ತಿಗೆಯ ಜಮೀನುದಾರನ ಬಳಿ ಹೋಗಿ, ಒಂದಕ್ಕೆ ಎರಡು ಗುತ್ತಿಗೆ ಕೊಡುತ್ತೇನೆ. ನನಗೆ ಈಗಲೇ ಕೊಯ್ಯಲು ಅನುಮತಿ ನೀಡಿರೆಂದು ಬೇಡಿ, ಮನೆಯವರ ಅನುರೋಧದ ನಡುವೆಯೇ ಬೆಳೆಯನ್ನು ಕೊಯ್ಯಿಸುತ್ತಾನೆ. ಜನ ಇವನನ್ನು ಕಂಡು ಹುಚ್ಚನೆನ್ನುತ್ತಾರೆ. ಗುರುಗಳು ವಾಪಸ್ಸು ಬಂದು ನೋಡಿ, ಅವನ ಶ್ರದ್ಧೆಗೆ ಬೆರಗಾಗುತ್ತಾರೆ. ಮುಂದೆ ಕೆಲ ದಿನದಲ್ಲಿ ಶೀತ ಗಾಳಿ ಬೀಸಿ ಎಲ್ಲರ ಗದ್ದೆಯ ಜೋಳ ನಾಶವಾಗುತ್ತದೆ. ನಂತರ ಬಂದ ಮಳೆಗೆ ಈ ರೈತನ ಹೊಲದ ದಂಟುಗಳು ಒಂದಕ್ಕೆ ನಾಲ್ಕು ಚಿಗಿತು ಭಾರಿ ಜೋಳ ಇವನಿಗೆ ದೊರೆಯುತ್ತದೆ. ಎಲ್ಲರಿಗೆ ಅವರವರ ಪಾಲು ನೀಡಿ ಸಾಕಷ್ಟು ದಾನ ಮಾಡುತ್ತ ಗುರು ಮಹಿಮೆಯನ್ನು ಕೊಂಡಾಡುವುದೇ ನಲವತ್ತೆಂಟನೆಯ ಅಧ್ಯಾಯ. ಗುರು ವಾಕ್ಯದಲ್ಲಿ ಭಾವ ದೃಢವಿದ್ದರೆ ಏನೂ ಸಾಧ್ಯ. 

ಮುಂದುವರಿಯುವುದು...

No comments:

Post a Comment