ಒಟ್ಟು ನೋಟಗಳು

Tuesday, June 20, 2017

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 40


ಕಾಷ್ಠಶುಷ್ಕಕೆ ತರಿಸಿ ಪಲ್ಲವ । ಕುಷ್ಠ ರೋಗವ ನಾಶ ಮಾಡಿದ ।
ಶ್ರೇಷ್ಠ ಮಹಿಮಾ ವರ್ಣನವು ನಲವತ್ತರಲಿ ತಿಳಿಯೇ || 40 ||

ಗುರುಗಳು ಗಾಣಗಾಪುರದಲ್ಲಿರುವಾಗ, ನರಹರಿ ಎಂಬ ಯಜುಶಾಖಾಧ್ಯಾಯಿ ಪಂಡಿತನು ಗುರುಗಳನ್ನು ನಮಿಸಿ "ಕುಷ್ಠದಿ ಬಳಲುವ ನನ್ನನ್ನು ಜನ ನೋಡಲಿಚ್ಚಿಸರು, ಅಪಹಾಸ್ಯ ಮಾಡುವರು.... ಹೇ ದಯಾನಿಧಿ ನಿನ್ನ ಅಪಾರ ಮಹಿಮೆಯನ್ನು ಕೇಳಿ ಇಲ್ಲಿಗೆ ಬಂದೆ. ನೀನೆ ಉದ್ಧರಿಸಬೇಕು' ಎಂದು ಶರಣಾಗುತ್ತಾನೆ. ಅಷ್ಟರಲ್ಲಿ ದಾರಿಯಲ್ಲಿ ಒಬ್ಬನು ಒಣಗಿದ ಅಶ್ವತ್ಥ ಮರದ ತುಂಡನ್ನು ಉರವಲಿಗಾಗಿ ಒಯ್ಯುತ್ತಿರುವುದನ್ನು ನರಹರಿಗೆ ಕೊಡಿಸಿ 'ಇದನ್ನು ನೆಟ್ಟು ನೀರು ಹನಿಸು. ಇದು ಚಿಗುರಿದಾಗ ನಿನ್ನ ಕುಷ್ಠ ನಾಶವಾಗುತ್ತದೆ' ಎನ್ನುತ್ತಾರೆ. ಗುರುವಾಕ್ಯ ಪ್ರಮಾಣವೆಂದು ನಂಬಿದ ಅವನ ಸೇವೆ ಕಂಡು ಜನ ಹಾಸ್ಯ ಮಾಡುತ್ತಾರೆ. ಆದರೆ ವಿಚಲಿತನಾಗದ ನರಹರಿಯ ಸೇವೆಯಿಂದ ತೃಪ್ತರಾದ ಗುರುಗಳು ತಮ್ಮ ಕರುಣಾದೃಷ್ಟಿಯನ್ನು ಬೀರಲು ಒಣಕೊರಡು ಚಿಗುರುತ್ತದೆ. ನರಹರಿಯ ಕುಷ್ಠವು ದೂರವಾಗುವ ಗುರುಲೀಲೆಯೇ ನಲವತ್ತನೆಯ ಅಧ್ಯಾಯ. 

ಮುಂದುವರಿಯುವುದು...

No comments:

Post a Comment