ಶ್ರೀ ಗುರುಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 42
ಗುರುವು ಸಾಯಂದೇವನ ಸತಿ ಪುತ್ರರನು ಕರಸುತ ವರವನಿತ್ತನು ।
ಗುರುವರನವ ಸ್ತುತಿಸಿದನು ನಲವತ್ತೆರಡರಲಿ ತಿಳಿಯೇ || 42 ||
ಸಾಯಂದೇವನಿಗೆ ಪ್ರೀತಿಯಿಂದ ಗುರುಗಳು ಕಾಶಿಯ ಅನೇಕ ತೀರ್ಥಗಳ ಪಾಪರಾಶಿಯನ್ನು ತೊಳೆವ ಗಂಗೆಯ ಹಾಗೂ ಕ್ಷೇತ್ರ ವಿಧಿಗಳನ್ನು ಹೇಗೆ ಆಚರಿಸಬೇಕೆಂಬುದನ್ನು ಪ್ರೀತಿಯಿಂದ ತಿಳಿಸುತ್ತಾರೆ. ಕಾಶೀಯಾತ್ರೆ ಮಾಡದ ಜನ್ಮ ನಿರರ್ಥಕವೆನ್ನುತ್ತಾ, ಸಾಯಂದೇವನ ಪತ್ನಿ, ಮಕ್ಕಳನ್ನು ಗುರುಗಳು ಹರಸುತ್ತಾರೆ. ಮುಂದೆ ಗುರು ಮಠಕ್ಕೆ ಕರೆದೊಯ್ದು ಅನಂತ ವ್ರತದ ಮಹಿಮೆಯನ್ನು ತಿಳಿಸಿ ಅದನ್ನಾಚರಿಸಲು 'ಅದು ಮಾಡುವ ವಿಧಾನವೆಂತು, ಅನಂತನೆಂದರೆ ಯಾರು' ತಿಳಿಸಬೇಕೆಂದು ಕೇಳಿದಾಗ ಶಿಷ್ಯನ ಮೇಲಿನ ಪ್ರೇಮದಿಂದ ಕಥೆಯನ್ನು ಹೇಳಲು ಸಿದ್ಧರಾಗುವುದೇ ನಲವತ್ತೆರಡನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment