ಒಟ್ಟು ನೋಟಗಳು

Tuesday, June 20, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 20
ವಿಶ್ವಾತ್ಮನಾದ ಗುರುವಿಗೆ ಅರಿಯದುದೇನಿದೆ?



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಗುರುನಾಥರ ಬಳಿ ಹೋದಾಗ ಒಬ್ಬೊಬ್ಬೊರಿಗೆ ಒಂದೊಂದು ರೀತಿಯ ವಿಚಿತ್ರ ಆದರೂ ಸತ್ಯವಾದ ಅನುಭವಗಳಾಗಿವೆ. ಒಬ್ಬ ಗುರುಭಕ್ತರನ್ನು ಗುರುನಾಥರು ನೋಡಲು ಬಂದರಂತೆ. ಆನಂತರ “ ಏನು ಮಾಡ್ತಿದಿರೀ, ಪುರುಸೊತ್ತು ಇದೆಯಾ, ಒಂದು ಸ್ವಲ್ಪ ಬೆಂಗಳೂರಿಗೆ ಹೋಗಬೇಕಿದೆಯಲ್ಲಾ” ಎಂದರಂತೆ ಗುರುನಾಥರು. ಅದಕ್ಕೆ ಆ ಭಕ್ತರು “ಗುರುಗಳೇ ಶೃಂಗೇರಿಗೆ ಹೋಗಿ ಬೇಕಿದೆಯಲ್ಲಾ ಇವತ್ತು" ಎಂದಾಗ ಯಾಕಾಗಿ,  ಅಂದು ಮತ್ತೇ ಕೇಳಿದಾಗ ಅವರು ಶಾರದೆಯನ್ನು ನೋಡಲು ಎಂದರು.

ಗುರುನಾಥರ ಹಗುರವಾಗಿ ನಕ್ಕು ಬಿಟ್ಟು ಅದಕ್ಕೆ ಅಷ್ಟು ದೂರ ಹೋಗಬೇಕೆ, ಬನ್ನಿ ಇಲ್ಲಿ ಎಂದು ಅವರನ್ನು ಕರೆದುಕೊಂಡು ಜಮೀನಿನ ಬಳಿ ಬಂದರು. ಒದುವಿನ ಮೇಲೆ ಒಬ್ಬ ಹೆಂಗಸರು ಹೋಗುತ್ತಿದ್ದರು. ಗುರುನಾಥರು ಅವರನ್ನು ಪ್ರೀತಿ ಗೌರವಗಳಿಂದ “ಅಮ್ಮಾ ಇಲ್ಲಿ ಸ್ವಲ್ಪ ಬಾರಮ್ಮ” ಎಂದು ಕರೆದರಂತೆ. ನಂತರ ನಿಮ್ಮ ಬಳಿ ಎಷ್ಟು ದುಡ್ಡಿದೆ ಜೇಬಿನಲ್ಲಿ ಎಂದು ಕೇಳಿದಾಗ ಆ ಭಕ್ತರು ತಮ್ಮ ಬಳಿ ಇದ್ದ ಐವತ್ತು ರೂಗಳನ್ನು ಕೊಟ್ಟಾಗ, ಸನಿಹ ಬಂದ ಆ ತಾಯಿಗದನ್ನು ಕೊಡಿಸಿ ನಮಸ್ಕಾರ ಮಾಡಿ ಸಾರ್ ಎಂದರಂತೆ ಆ ತಾಯಿ ಅತ್ತ ನಡೆದರು.

ಅರ್ಥವಾಗಿದೆ ಇದೆಲ್ಲಾ ನೋಡುತ್ತಿದ್ದ ಅವರಿಗೆ, ಗುರುನಾಥರು ಏನ್ ಸಾರ್ ಗೊತ್ತಾಗಲಿಲ್ಲವೆ? ಶೃಂಗೇರಿಯ ಶಾರದಮ್ಮನವರಿಗೆ ನೀವೀಗ ನಮಿಸಿದ್ದು ಎಂದರಂತೆ. ಗುರುನಾಥರು ಹೀಗೆ ದೇವಾನುದೇವತೆಗಳನ್ನು ಯಾವು ಯಾವುದೋ ರೂಪದಲ್ಲಿ ತಮ್ಮ ಶಿಷ್ಯರಿಗೆ ತೋರಿಸಿದ್ದಿದೆ.

ಮತ್ತೊಂದು ವಿಚಿತ್ರ ಘಟನೆ ನೋಡಿ ಹೇಗಿದೆ. ಎತ್ತಲಿಂದಲೋ ಗುರುನಾಥರು ಸಕ್ಕರಾಯಪಟ್ಟಣಕ್ಕೆ ಕಾರಿನಲ್ಲಿ ಬರುತ್ತಿದ್ದರು. ಸಂಜೆಯ ಸಮಯ ಇದಕ್ಕಿದ್ದಂತೆ ಗುರುನಾಥರು “ಕಾರನ್ನು ಕಟೀಲಿಗೆ ನಡೆಸಯ್ಯ" ಎಂದರು ಡ್ರೈವರಿಗೆ. ಆತ ಒಂದು ಕ್ಷಣ ಗಾಭರಿಯಾದರು. ಗುರುಗಳೇ,  ಈಗಾಗಲೇ ಸಮಯ ಆಗಿದೆ. ಇಷ್ಟು ಹೊತ್ತಿಗಿಲ್ಲಿಂದ ಹೊರಟು ನಾವು ಕಟೀಲು ತಲುಪುವ ಹೊತ್ತಿಗೆ ಹನ್ನೆರಡು ರಾತ್ರಿಯಾಗಿರುತ್ತೆ, ದೇವಸ್ಥಾನದ ಬಾಗಿಲು ಹಾಕಿರುತ್ತಾರೆ” ಎಂದಾಗ "ಆಯ್ತು ನಡೆಸಪ್ಪಾ" ಎಂದರು. 

ಡ್ರೈವರ್‌ ಸಾಹೇಬರು ತಮ್ಮ ಮನಸ್ಸಿನಲ್ಲಿ ಕಟೀಲಿಗೆ ಹೋಗಬೇಕು, ಅಮ್ಮನವರ ದರ್ಶನ ಮಾಡಬೇಕೆಂದು ಒಂದು ಕ್ಷಣದ ಹಿಂದೆ ಚಿಂತಿಸಿದ್ದರು ಆದರೆ ಅದು ಹೇಗೆ ಹಿಂದೆ ಕುಳಿತ ಗುರುನಾಥರಿಗೆ ಅರ್ಥವಾಯ್ತು? ಅದು ಈ ಸರಿ ರಾತ್ರಿಯಲ್ಲಿ ಬಾಗಿಲು ಹಾಕಿರುತ್ತೆ. ದರ್ಶನ ಹೇಗಾಗುತ್ತೆ ಎಂಬ ಅನುಮಾನವೂ ಬಂದಿತು. ಆದರೆ ಗುರು ನುಡಿಗೆ ತಲೆಬಾಗಿ ಡ್ರೈವರ್ ಸಾರ್ ನಡೆಸಿದರು.

ರಾತ್ರಿಯ ಹನ್ನೆರಡಾಗಿತ್ತು, ಕಟೀಲು ತಲುಪಿದಾಗ.  ದೇವಾಲಯದ ಬಳಿ ಹೋದಾಗ ರಸ್ತೆ‌ಯಿಂದಲೇ ನೇರವಾಗಿ ಅಮ್ಮನವರ ದರ್ಶನವಾಯ್ತು. ಇದೇನು ಈ ಸರಿ ರಾತ್ರಿಯಲ್ಲಿ ಹೀಗೆ ಬಾಗಿಲು ತೆರೆದಿದೆ? ಎಂದು ಪ್ರಶ್ನಿಸಿದ್ದಕ್ಕೆ, ನಾಳೆ ಅದಾವುದೋ ಸಮಾರಂಭವಿರುವುದರಿಂದ - ಬೆಳಗಿನ ಮುಂಚೆಗೆಲ್ಲ ದೇವಾಲಯವನ್ನು ಶುಚಿಗೊಳಿಸುವುದು ಕಷ್ಟವೆಂದು, ಆ ಸರಿ ರಾತ್ರಿಯಲ್ಲಿ ಭರದಿಂದ ಕೆಲಸ ಸಾಗಿತ್ತು. ಬಂದವರಿಗೆ ಅಮ್ಮನವರ ದರ್ಶನವೂ ಲಭಿಸಿತ್ತು. ಹೀಗೆ ಗುರುವಾಕ್ಯಕ್ಕೆ ಎಂತೆಂಥ  ಅಸಂಗತಗಳೂ ಸಂಗತವಾಗಿ, ಸತ್ಯದ್ಯೋಸಕವಾಗಿ ದರ್ಶಿತವಾಗಿ ಬಿಡುತ್ತದೆ.

ಹೀಗೆ ಮತ್ತೂರಿನ ಸನತ್ ಕುಮಾರ್ ಎಂಬ ಭಕ್ತರು ಮತ್ತೊಬ್ಬ ಗುರು ಭಕ್ತರಾದ ಸಚ್ಚಿದಾನಂದ ಎಂಬುವರಿಗಾದ ಗುರುಲೀಲಾ ಪ್ರಕರಣವನ್ನು ಸತ್ಯಂಗಕ್ಕೆ ಹಂಚಿಕೊಂಡರು. ಅವರು ಹಂಚಿಕೊಂಡ ಮತ್ತೊಂದು ವಿಷಯ ಹೀಗಿದೆ..

“ನಮ್ಮೂರಿನ ಕೇಶವಧಾನಿಗಳೆಂಬ ಭಕ್ತರು ಯಾವುದೋ ಯಜ್ಞದ ನಿಮಿತ್ತ ಅಲ್ಲಿಗೆ ಹೋದವರು, ಗುರುನಾಥರ  ಬಗ್ಗೆ ಬಹಳ ಕೇಳಿದ್ದರು. ಭೂತ ಭವಿಷ್ಯತ್ ವರ್ತಮಾನವನೆಲ್ಲಾ ತಿಳಿದವರು ಗುರುನಾಥರೆನ್ನುತ್ತಾರಲ್ಲ, ಒಮ್ಮೆ ನೋಡಿಯೇ ಬರೋಣವೆಂದು ಅಲ್ಲಿಗೆ ಹೋಗಿದ್ದರಂತೆ. ಅಲ್ಲಿಗೆ ಹೋಗಿ ಗುರುನಾಥರ ಅಂಗಳಕ್ಕೆ ಬಂದಾಗ...ಮೊಮ್ಮಗ ಸಾಕೇತನಿಗಾಗಿ ಪ್ರತಿ ಸಾರಿ ಬೇರೆ ಊರಿಗೆ ಹೋಗಿ ಬಂದಾಗಲೂ ಚಾಕಲೇಟು ತರಬೇಕೆಂದು ಹಠ ಹಿಡೀತಿದಾನೆ.  ಈ ಸಾರಿಯಾದರೂ ತೆಗೆದುಕೊಂಡು ಹೋಗಬೇಕೆಂದು ಮನಸ್ಸಿನಲ್ಲಿ ಯೋಚಿಸುತ್ತದ್ದರಂತೆ. ಗುರುನಾಥರು ಎದುರಾದರಂತೆ.  ಬನ್ನಿ ಎಂದು ಸ್ವಾಗತಿಸಿದ ಅವರು, ಸನಿಹದಲ್ಲೇ ಚಾಕಲೇಟು ಬ್ಯಾಗು ಹಿಡಿದು ನಿಂತಿದ್ದವನಿಗೆ “ಬಾಪ್ಪಾ ಇಲ್ಲಿ ಆ ಚಾಕಲೇಟು ಅವಧಾನಿಗಳಿಗೆ ಕೊಡು” ಎಂದು ಹೇಳಿ ನೀವು ಚಾಕಲೇಟಿಗಾಗಿ ಅಲ್ಲಲ್ಲಿ ಅಲೆದು ಯಾವುದನ್ನೋ ಮನೆಗೊಯ್ಯಾಬೇಡಿ..ಇದನ್ನೇ ತೆಗೆದುಕೊಂಡು ಹೋಗಿ ಮನೆಗೆ" ಅಂದುಬಿಟ್ಟರಂತೆ ಗುರುನಾಥರು. ಅವಧಾನಿಗಳು ತಬ್ಬಿಬ್ಬಾದರು. ಗುರುಸಾಮರ್ಥ್ಯಕ್ಕೆ ಬೆರಗಾಗಿ ತಲೆಬಾಗಿದರಂತೆ. ಪ್ರಿಯ ಸತ್ಸಂಗ ಅಭಿಮಾನಿಗಳೇ,  ಪ್ರಪಂಚದ ಎಲ್ಲ ಆತ್ಮಗಳೊಂದಿಗೆ ಸಂಬಂಧ ಬೆಸೆದುಕೊಂಡ ವಿಶ್ವಾತ್ಮರಿಗೆ ಅರಿವಾಗದ ಹೃದಯ ಯಾವುದಿದೆ? ಯಾರ ಅಭಿಲಾಷೆ ಏನೆಂದರಿತು ಪೂರೈಸುವುದೇ ಗುರುತನವಲ್ಲವೇ? ನಾಳೆಯೂ ಬನ್ನಿ ಮತ್ತೇನು ಗುರುತರವಾದುದು ದೊರೆವುದೋ ಅನುಭವಿಸೋಣ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment