ಒಟ್ಟು ನೋಟಗಳು

Monday, June 26, 2017

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 46


ಬರಲು ಹಿಪ್ಪರಿಗೆ ಗ್ರಾಮದಲಿ । ನರಹರಿಯುತಾನಾದನು  ।
ಗುರುವ ನಲವತ್ತಾರರಲಿ ಸ್ತುತಿಸಿದನು   || 46 ||

ಗಾಣಗಾಪುರದಲ್ಲಿ ಶ್ರೀ ಗುರುಗಳ ಮಹಿಮೆ ಅಪಾರವಾಗಿ ದೂರ ದೂರದಿಂದ ಭಕ್ತರು ಬಂದು ಗುರುವಿನ ಆಶೀರ್ವಾದ ಪಡೆಯುತ್ತಿದ್ದರು. ಹಿಪ್ಪರಿಗೆಯ ಒಬ್ಬ ಭಕ್ತನು ಗುರುವನ್ನು ಸಂಭ್ರಮದಿಂದ ತನ್ನೂರಿಗೆ ಕರೆತರುತ್ತಾನೆ. ಆ ಊರಿನಲ್ಲಿ ಕಲ್ಲೇಶ್ವರನನ್ನು ಪೂಜಿಸುತ್ತ ನರಹರಿ ಎಂಬ ದ್ವಿಜನು ನಿತ್ಯ ಹೊಸ ಹೊಸ ಐದು ಕವಿತೆ ಮಾಡಿ ಕಲ್ಲೇಶ್ವರನಿಗೆ ಅರ್ಪಿಸುತ್ತ ಕವೀಶ್ವರನೆಂದು ಹೆಸರಾಗಿದ್ದನು. ಗುರುಗಳ ಬಗ್ಗೆ ಕವಿತ್ವ ಬರೆಯಿರಿ ಎಂದರೆ ಕಲ್ಲೇಶ್ವರನಲ್ಲದೇ ಮಾನವರ ಮೇಲೆ ಕವಿತ್ವ ಮಾಡೆನೆನ್ನುವ. 

ಅಂದು ಕಲ್ಲೇಶ್ವರನ ಪೂಜೆ ಮಾಡುವಾಗ ಗುರುಗಳೇ ಅಲ್ಲಿ ಕಾಣುತ್ತಾರೆ. ಕವಿತೆ ಬರೆದರೆ ಅದು ಗುರುಗಳ ಸ್ತುತಿಯಾಗುತ್ತದೆ. ಕೂಡಲೇ ತಾನು ಮಾಡಿದ ತಪ್ಪಿನ ಅರಿವಾಗಿ ಗುರುಗಳ ಬಳಿ ಬಂದು ಕವೀಶ್ವರನು ಕ್ಷಮೆ ಯಾಚಿಸುತ್ತಾನೆ. ಗುರುಗಳು ಹರ್ಷದಿಂದ ಅವನನ್ನು ಆಶೀರ್ವದಿಸಿ ಕಲ್ಲೇಶ್ವರನಿಗೆ ಸ್ತುತಿಸಿದರೂ ಅದು ನನಗೇ ಸೇರುತ್ತದೆ. ನೀ ರಚಿಸಿದ ಕವಿತೆಗಳೆಲ್ಲಾ ನನಗೆ ಅರ್ಪಿತವಾಗಿದೆ ಎಂದು ಹೇಳಿ ವಸ್ತ್ರ ಭೂಷಣಗಳಿಂದ ನರಹರಿಯನ್ನು ಗುರುಗಳು ಸನ್ಮಾನಿಸುವುದೇ ನಲವತ್ತಾರನೆಯ ಅಧ್ಯಾಯ. 

ಮುಂದುವರಿಯುವುದು...

No comments:

Post a Comment