ಶ್ರೀ ಗುರುಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 44
ಗುರುವಂ ತಂತುಕನಿಂಗೆ ಶ್ರೀ ಗಿರಿ । ಹರನ ತೋರಿಸಿ ಮಹಿಮೆಯನು ವಿ ।
ಸ್ತರಿಸಿದನು ನಲವತ್ತನಾಲ್ಕನೆಯಲಿ ನೋಡಿದೆಯಾ || 44 ||
ಗಾಣಗಾಪುರದಲ್ಲಿ ಒಬ್ಬ ನೇಕಾರನಿದ್ದನು. ಅತ್ಯಂತ ಭೋಳೆ ಸ್ವಭಾವದವನಾದರೂ ಗುರುಭಕ್ತಿ ನಿಸ್ಸೀಮನು. ಶಿವರಾತ್ರಿಯು ಬರಲು ಊರವರೆಲ್ಲಾ ಮಲ್ಲಿಕಾರ್ಜುನ ಯಾತ್ರೆ ಹೋಗುತ್ತಾರೆ. ನೇಕಾರನನ್ನು ಕರೆದಾಗ "ಗುರುವೇ ನನಗೆ ಮಲ್ಲಿಕಾರ್ಜುನ. ನಾನೆಲ್ಲೂ ಬರಲೊಲ್ಲೆ" ಎನ್ನುತ್ತಾನೆ. ಶಿವರಾತ್ರಿಯ ದಿನ ಗುರುವಿಗೆ ವಂದಿಸಿ ನಿಂತಿರುವ ನೇಕಾರನಿಗೆ ಬಾ ಭಕ್ತಶಿರೋಮಣಿ, ಕಣ್ಣು ಮುಚ್ಚಿ ನನ್ನ ಪಾದುಕೆಗಳನ್ನು ಹಿಡಿ, ಮಲ್ಲಿಕಾರ್ಜುನಕ್ಕೆ ಹೋಗೋಣ ಎಂದರು. ಮನೋವೇಗದಿಂದ ಶ್ರೀಶೈಲ ತಲುಪಿದ ನೇಕಾರನು ಕ್ಷೌರ ಸ್ನಾನ ಮಾಡಿಸಿ ಮಲ್ಲಿಕಾರ್ಜುನನನ್ನು ಪೂಜಿಸಲು ಹೋದರೆ ಅಲ್ಲಿದ್ದುದು ಶ್ರೀ ಗುರುಗಳೇ. ಗುಂಪಿನಲ್ಲಿ ಕಂಡ ನೇಕಾರನನ್ನು ನೋಡಿದ ಊರವರು ಆಶ್ಚರ್ಯಪಟ್ಟರು. ಮತ್ತವನು ಗುರುಪಾದವನ್ನು ಹಿಡಿದು ಗಾಣಗಾಪುರ ತಲುಪಿದ್ದನು. ಹೀಗೆ ಗುರುವಿನ ಅದ್ಭುತ ಮಹಿಮೆಯನ್ನು ತಿಳಿಸುವ ಕಥಾನಕವೇ ನಲವತ್ತನಾಲ್ಕನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment