ಒಟ್ಟು ನೋಟಗಳು

Friday, June 30, 2017

ಗುರುನಾಥ ಗಾನಾಮೃತ 
ಭಜನೆಯ ಮಾಡೋಣಾ ಬನ್ನಿರಿ
ರಚನೆ: ಅಂಬಾಸುತ 


ಭಜನೆಯ ಮಾಡೋಣಾ ಬನ್ನಿರಿ
ಭಜನೆಯ ಮಾಡೋಣಾ
ಕರುಣೆಯ ಯಾಚಿಸಿ ಭಾವವ ವರ್ಧಿಸಿ 
ಭಜನೆಯ ಮಾಡೋಣಾ ||

ರಾಗಾ ತಾಳಗಳಾ ರೇಜಿಗೆ ಸಿಲುಕದಲೇ
ಮಾನಾಭಿಮಾನಗಳಾ ದೂರಕೆ ತಳ್ಳುತಾ 
ಭಜನೆಯ ಮಾಡೋಣಾ ||

ಗುರುವನು ಸ್ಮರಿಸುತಲೀ ಗುರುತರ ಭಕ್ತಿಯ ಬೇಡುತಲೀ
ಕುಣಿಯುತ ಮೈಯನು ಮರೆಯುತ ನಾವೂ
ಭಜನೆಯ ಮಾಡೋಣಾ ||

ಸಂಸಾರ ಸುಖದುಖವಾ ಸದ್ಗುರು ಚರಣದ ಮೇಲಿಟ್ಟೂ
ಧನ್ಯನಾವೆನುತಾ ಪ್ರದಕ್ಷಿಣೆ ಮಾಡುತಾ
ಭಜನೆಯ ಮಾಡೋಣಾ ||

ಸಖಸಖಿಯರ ಒಡಗೂಡೀ ಸಾತ್ವಿಕ ಭಾವವ ಬೆಳೆಸೀ
ಸಖರಾಯಪುರವಾಸ ಸಲಹೋ ಎನ್ನುತ
ಭಜನೆಯ ಮಾಡೋಣಾ ||

ಆನಂದ ಮನದೊಳಗಿರಿಸೀ ಅತಿಷಯ ಪ್ರೇಮವ ತುಂಬೀ
ಅಂಬಾಸುತನಾ ಸದ್ಗುರುವ ನೆನೆಯುತ
ಭಜನೆಯ ಮಾಡೋಣಾ ||

No comments:

Post a Comment