ಗುರುನಾಥ ಗಾನಾಮೃತ
ಬಾರಾ ಬಾರಾ ಹೇ ಗುರುವರಾ
ರಚನೆ: ಅಂಬಾಸುತ
ಬಾರಾ ಬಾರಾ ಹೇ ಗುರುವರಾ
ಭಕುತ ಜನ ಮನ ವಿಹಾರಾ ||ಪ||
ಅರಿತವರ್ಯಾರೋ ನಿನ್ನ ಮಹಿಮೆ ಅಪಾರಾ
ಹರಿಸೋ ಎನ್ನೊಳಗೆ ಭಕ್ತಿ ಸುಧಾರಸಧಾರಾ ||೧||
ನೀನಿರದಾ ಈ ಬದುಕು ನಿಸ್ಸಾರಾ
ಜೊತೆಗಿದ್ದು ನೀ ನಡೆಸಬೇಕೋ ಈ ಸಂಸಾರಾ ||೨||
ತೋರಿಸೋ ನೀ ಎನಗೇ ಜಗವಂದ್ಯರಾ ||೩||
ಸಾಧಕರಿಗೆ ತವ ನಾಮವೇ ಆಹಾರಾ
ಅವರೊಳಗೇ ನಾ ಕಂಡೇ ನಿನ್ನ ಸಂಚಾರಾ ||೪||
ಸಖರಾಯಪುರವಾಸ ಶ್ರೀ ಗುರುವರಾ
ಅಂಬಾಸುತನ ನೀ ನೀಡಲೇ ಬೇಕು ವರಾ ||೫||
No comments:
Post a Comment