ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 13
ಜೀವನ ಸಾರ್ಥಕ ಮಾಡಿಕೊಳ್ಳಲು ಕೊಡಿ.... ಆದರೆ ಕೊಡೋಕೆ ನಿಮ್ಮದೇನಿದೆ?
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
“ಗುರುಗಳೆನಿಸಿದ ಅನೇಕರು ಭಕ್ತರಿಂದ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಏನನ್ನೂ ಯಾರಿಂದಲೂ ಅಪೇಕ್ಷಿಸದೆ, ಬಂದವರಿಗೆಲ್ಲಾ ಮನಃ ತೃಪ್ತಿಯಾಗಿ ಕೊಡುತ್ತಾ, ಕೊಡುವ ಮಹಾನ್ ದಾನ ಶೂರತೆಯನ್ನು ತಮ್ಮ ಭಕ್ತರಲ್ಲಿ ಬಿತ್ತುತ್ತಾ ‘ಬಲಗೈಲಿ ಕೊಟ್ಟದು ಎಡಗೈಗೆ ಗೊತ್ತಾಗಬಾರದು’ ಎಂಬ ನಿಯಮದಂತೆ ನಡೆದು, ಅದನ್ನೆ ತಮ್ಮ ಶಿಷ್ಯರಲ್ಲಿ ಬೆಳೆಸಿ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದ ಯಾರಾದರೂ ಮಹಾತ್ಮರಿದ್ದಾರೆಂದರೆ ಅದು ನಮ್ಮ ಸಕ್ಕರಾಯಪಟ್ಟಣದ ಗುರುನಾಥರು” ಎಂದು ನಿತ್ಯ ಸತ್ಸಂಗಕ್ಕೆ ತಮ್ಮ ಅನುಭವವನ್ನು ಹಂಚಿಕೊಂಡರು ಹಾಸನದ ಒಬ್ಬ ಗುರುಭಕ್ತರು.
ಅರ್ಥವಿಲ್ಲದ ಕಂದಾಚಾರಗಳನ್ನು ಕಟುವಾಗಿ, ಹಾಸ್ಯಮಯವಾಗಿ ಆಗಾಗ್ಗೆ ಆಪ್ತರೆದುರು ಟೀಕಿಸುತ್ತದ್ದ ಗುರುನಾಥರು, ಒಮ್ಮೆ ಬಾಳೆಹಣ್ಣಿನ ತೊಟ್ಟನ್ನು ಯರ‍್ಯಾ ಬಿರ್ರೀ ಮುರಿಯುತ್ತಿರುವವರನ್ನು ಕಂಡು “ಅದೇಕ್ ಸಾರ್ ಅಷ್ಟು ಸುಂದರವಾಗಿರುವ ಬಾಳೆಹಣ್ಣನ್ನು ಈ ರೀತಿ ಹಿಂಸೆ ಮಾಡುತ್ತಾ ತೊಟ್ಟು ಮುರಿತಿದೀರಿ” ಎಂದು ಕೇಳಿದರಂತೆ. ಅದಕ್ಕೆ ಶಿಷ್ಯರು ನೈವೇದ್ಯವಾಗಿದೆ ಎಂದು ಗುರುತುಗಾಲು” ಎಂದಾಗ, ನಗುತ್ತಾ ಗುರುನಾಥರು “ಆ ಹಣ್ಣು ಯಾರದ್ದು ಸಾರ್” ನೀವು ಯಾರಿಗೆ ನೈವೇದ್ಯ ಮಾಡ್ತೀರಿ ಸಾರ್? ನಮ್ಮದಲ್ಲದನ್ನು ಕೊಡುವ ಹಕ್ಕು ನಮಗೆ ಹೇಗೆ ಬರುತ್ತೆ ಸಾರ್? ಎಲ್ಲವೂ ಅವನೇ ಕೊಟ್ಟಿರುವಾಗ ಅವನು ಕೊಟ್ಟಿದ್ದನ್ನು ಅವನಿಗೆ ಕೊಡುವ ನೆಪದಲ್ಲಿ ತೊಟ್ಟು ಮುರಿದು ವಿರೂಪವಗೊಳಿಸಿ, ಅದರ ಮೇಲೆ ಧೂಳು ದುಪ್ಪಟ್ಟು ಬೀಳುವಂತೆ ಮಾಡುವುದು ಬೇಕಾ ಸಾರ್? ಬಾಳೆಹಣ್ಣನ್ನು ಅವನಿಗೆ ಕೊಡಲು ನಮಗೆ ಹಕ್ಕಿಲ್ಲದಿದ್ದರೇನಂತೆ, ಈ ಬಾಳನ್ನು ಪರೋಪಕಾರ, ಇತರರ ಸೇವೆ, ಸದ್ ವರ್ತನೆ, ಸದ್ ಚಿಂತನೆಗಳಿಂದ ಬೀಗುವ, ಒರಟಾದ, ಸ್ವಾರ್ಥಪರವಾದ, ದೋಷಯುಕ್ತವಾದ ಈ ದೇಹವನ್ನು, ಈ ಬಾಳನ್ನು ಹಣ್ಣು ಮಾಡಿ ಪಕ್ವಗೊಳಿಸಿ ಆ ಪರಮಾತ್ಮನಿಗೆ ಬಾಳೆಹಣ್ಣಾಗಿ ಅರ್ಪಿಸಿದರೆ ಉತ್ತಮವಲ್ಲವೇ ಸಾರ್? ಎಂದು ತಮಾಷೆಯಾಗಿ ಹೇಳಿದಾಗ ಅಲ್ಲಿ ಕುಳಿತ ಅನೇಕರಿಗೆ ಗುರುನಾಥರೆಂದರೇನೆಂಬುದು ಅರ್ಥವಾಗಿರಲಿಕ್ಕಿಲ್ಲವಂತೆ. ಆದರೆ, ಪದೇ ಪದೇ ಗುರುನಾಥರ ಬಾಯಿಂದ ಇಂತಹ ಮಾತುಗಳನ್ನು ಕೇಳಿದ ನಿಕಟವರ್ತಿಗಳಿಗಿದು ಮನದಟ್ಟಾಗಿತ್ತಂತೆ. ಇಂತಹ ಹಾಸ್ಯ ಚಟಾಕಿಗಳ ಮಧ್ಯದಲ್ಲಿ ಜೀವನದ ರೀತಿ ನೀತಿಗಳನ್ನು ಸಹಜವಾಗಿ ಕಾಣುವ, ತೋರಿಸುತ್ತಿದ್ದ ಗುರುನಾಥರು ಅತ್ಯಂತ ಸರಳ, ಪರಿಸರ ಪ್ರೇಮಿ, ದಯಾವಂತ ಕರುಣಾಶಾಲಿಗಳೆಂದರೆ ಅತಿ ಏನಲ್ಲ. “ಕೊಡಿ ಸಾರ್ ಎಷ್ಟಾದರೂ ಕೊಡಿ ಸಾರ್, ಕೊಟ್ಟರೆ ಕಮ್ಮಿ ಆಗಲ್ಲ ಕೊಡ್ತಾನೆ ಇರಿ ಸಾರ್ ಮತ್ತೆ ಮತ್ತೆ ಅದು ಬರ‍್ತಾನೆ ಇರುತ್ತೆ. ಆದರೆ ನಾನು ಕೊಟ್ಟೆನೆಂಬ ಅಹಂಕಾರದಿಂದ ಮಾಡುವ ದಾನ ಮಾತ್ರ ದಾನವಾಗದು. ಒಂದೂ ನಮ್ಮ ಹತ್ರ, ನಮ್ಮದೂ ಎಂಬ ಸ್ವಂತದ್ದೇನು ಇಲ್ಲದಿರುವುದರಿಂದ ನಾವೇನು ದಾನ ಮಾಡಲು ಬಹು ದೊಡ್ಡ ದಾನ ಮಾಡಿದ್ದೇವೆಂಬ ಭಾವನೆ ಏನಾದರೂ ಬಂದರೆ ಮಾರ್ಮಿಕವಾಗಿ ಅವರ ಅಹಂ ಅನ್ನು ಮೆಟ್ಟಿ ಬಿಡುತ್ತಿದ್ದರಂತೆ.
ಗುರುನಾಥರ ನುಡಿ ಯಾರನ್ನೂ ಕುರಿತದ್ದಾಗಿ ಎಂದು ಯಾರೂ ಊಹಿಸಲಾಗುತ್ತಿರಲಿಲ್ಲ. ಆದರೆ ಬಿಟ್ಟ ಬಾಣ ಮಾತ್ರ ಯಾರನ್ನು ತಲುಪಬೇಕೋ, ಯಾರನ್ನು ತಿದ್ದಬೇಕೋ ಅವರನ್ನು ತಿದ್ದುತ್ತಿತ್ತು, ತಲುಪಿರುತ್ತಿತ್ತು. ಅಹಂಕಾರವನ್ನು ಪ್ರಾರಂಭದಲ್ಲಿಯೇ ಕಿತ್ತೆಸೆಯುತ್ತಿತ್ತು.
ಗುರುನಾಥರ ಅಪ್ತವಲಯದಲ್ಲಿ ಗುರುತಿಸಿಕೊಂಡವರು ತಮ್ಮ ತನವೇನಾದರು ತೋರಿಸಲು ಪ್ರಯತ್ನಿಸಿದರೆ ಪರಿಣಾಮವೇ ಬೇರೆಯಾಗುತ್ತಿತ್ತಂತೆ. ಅವರ ನಿಕಟವರ್ತಿಯಾಗಿ ಮೂವತ್ತು ವರ್ಷಗಳ ಸಹವಾಸ ಸೇವೆ ಮಾಡಿದ ದೇವನೂರಿನ ಶ್ರೀಕಾಂತ್ ಎಂಬುವ ಭಕ್ತರೊಬ್ಬರು ತಮ್ಮ ಅನುಭವಗಳನ್ನು ಹೀಗೆ ಹೇಳಿಕೊಳ್ಳುತ್ತಾರೆ. “ಗುರುನಾಥರು ಎಷ್ಟು ಶಾಂತರೋ, ಅವರ ಸಹವಾಸ ಎಷ್ಟು ಆನಂದವನ್ನು ಕೊಡುತ್ತಿತ್ತೋ ನಾವು ಅಷ್ಟೇ ಎಚ್ಚರಿಕೆಯಿಂದ ಕೇವಲ ಭಕ್ತಿಯಿಂದ ಇರುವುದೊಂದೇ, ಗುರುವಾಕ್ಯ ಪ್ರಮಾಣ, ಮಹಾಪ್ರಸಾದವೆಂದು ಇದ್ದರೆ ಎಲ್ಲಾ ಸುಸೂತ್ರ. ಅನೇಕ ಸಾರಿ ಬೇಕಂತಲೇ ಅಭಿಪ್ರಾಯವನ್ನು ಕೇಳುತ್ತಿದ್ದರೂ ನಮ್ಮ ಮಿತಿಯಲ್ಲಿ ನಾವಿರಬೇಕಿತ್ತು. ಗುರುನಾಥರೊಡನಾಟವೆಂದರೆ ಎಚ್ಚರಿಕೆಯೂ ಅನಿವಾರ್ಯವಾಗಿತ್ತು ಯಾವ ಕ್ಷಣಕ್ಕೆ ಬೆಂಕಿಯ ಉಂಡೆಗಳು ನಮ್ಮ ಮೇಲೆ ಎಲ್ಲಿಂದ ಹೇಗೆ ಎಸೆಯಲ್ಪಡುತ್ತಿತೋ ಅರಿಯೆವು, ಅದನ್ನು ಎದುರಿಸುವುದು ಕಷ್ಟ, ಸಹಿಸುವುದೂ ಅಸಾಧ್ಯ. ನಮ್ಮ ಮಿತಿಯಲ್ಲಿ ಭಕ್ತಿಯಲ್ಲಿದ್ದಾಗ ಮಾತ್ರ ಅದೊಂದು ಸ್ವರ್ಗದಾಯಕ ಆನಂದವಾಗಿರುತ್ತಿತ್ತು” ಎನ್ನುತ್ತಾರೆ.
ಯಾವುದೋ ಪೂರ್ವ ಜನ್ಮದ ಪುಣ್ಯದ ಫಲದಿಂದ ಗುರುನಾಥರ ದರ್ಶನ ಭಾಗ್ಯ ಸಿಕ್ಕಿರುತ್ತದೆ. ಮತ್ತೊಂದಿಷ್ಟು ಅಧಿಕ ಪುಣ್ಯದಿಂದ ಅವರ ಸಾಮೀಪ್ಯ ಒದಗಿರುತ್ತದೆ. ಅಂದ ಮಾತ್ರಕ್ಕೆ ನಾವು ಇತರರಿಗಿಂತ ಬಹು ದೊಡ್ಡವರೆಂದು ಬೀಗದೆ ಇರುವುದೇ, ಇರುವವರೇ ಗುರುನಾಥರ ಪ್ರಿಯ ಬಂಧುಗಳು. ಅಂತಹ ಪ್ರಿಯ ಬಂಧುಗಳಲ್ಲೊಬ್ಬರು ನಾವಾಗಲು ಗುರುನಾಥರ ನಿತ್ಯ ಸತ್ಸಂಗ ಒಂದು ಮಾರ್ಗವಾದೀತು. ಪ್ರಿಯ ಸತ್ಸಂಗ ಪ್ರೇಮಿಗಳೇ ನಾಳೆಯೂ ಬರುವಿರಲ್ಲಾ... ನಮನಗಳು.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment