ಒಟ್ಟು ನೋಟಗಳು

Tuesday, June 13, 2017

ಶ್ರೀ ಗುರು ಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 33


ಕ್ಷಿತಿಪತಿಗೆ ರುದ್ರಾಕ್ಷ ಮಹಿಮೆಯ । ಯತಿವರೇಣ್ಯನು ಕುಕ್ಕುಟದ  ।
ಸತ್ಕಥೆಯ ಮೂವತ್ತಮೂರರಲ್ಲಿ ಹೇಳಿದನು ಶ್ರೀಗುರುವು  || 33 ||

ದತ್ತನು ಎದ್ದು ಕುಳಿತು ಪತ್ನಿಯಿಂದ ಎಲ್ಲಾ ವಿಚಾರ ತಿಳಿದು ಸಂಭ್ರಾಂತನಾಗಿ, ಗುರುವಿಗೆ ವಂದಿಸಿ ರುದ್ರಾಕ್ಷಿ ಹಾಗೂ ರುದ್ರಾಧ್ಯಾಯದ ಮಹಾತ್ಮೆಯನ್ನು ತಿಳಿಸಬೇಕೆಂದು ಬೇಡುತ್ತಾನೆ. ಅತ್ಯಂತ ಪತಿವ್ರತೆ ವೇಶ್ಯೆಯೊಬ್ಬಳ ಬಳಿ ಒಂದು ಮಂಗ ಹಾಗೂ ಕೋಳಿಗಳಿದ್ದವು. ಅವುಗಳಿಗೆ ವೇಶ್ಯೆಯು ರುದ್ರಾಕ್ಷಿಯನ್ನು ಕಟ್ಟಿದಳು. ಅಕಸ್ಮಾತ್ತಾಗಿ ಎಲ್ಲವೂ ಸುಟ್ಟು ಭಸ್ಮವಾದವು. ರುದ್ರಾಕ್ಷಿ ಇದ್ದುದರಿಂದ ಅವೆರಡೂ ರಾಜನ ಹಾಗೂ ಮಂತ್ರಿಯ ಮಗನಾಗಿ ಮುಂದಿನ ಜನ್ಮದಲ್ಲಿ ಜನಿಸಿದ್ದು, ಅವು ಅಲ್ಪಾಯುಷಿಗಳಾಗಿದ್ದವು. ಅರಿತೋ ಅರಿಯದೆಯೋ ರುದ್ರಾಕ್ಷಿ, ಭಸ್ಮಗಳನ್ನು ಧರಿಸಿದ ಮಾತ್ರಕ್ಕೆ ಅದೆಂತಹ ಫಲ ಸಿಗುತ್ತದೆಂಬುದನ್ನು ಶ್ರೀ ಗುರುಗಳು ಅರುಹಿದರೆಂಬ ವಿಚಾರ ಮೂವತ್ತಮೂರನೆಯ ಅಧ್ಯಾಯವಾಗಿದೆ. 

ಮುಂದುವರಿಯುವುದು...

No comments:

Post a Comment