ಒಟ್ಟು ನೋಟಗಳು

Wednesday, June 7, 2017

ಗುರುನಾಥ ಗಾನಾಮೃತ 

ಬಂದಾ ನೋಡೇ ಭಿಕ್ಷಕೆ ಗುರುರಾಯಾ
ರಚನೆ: ಅಂಬಾಸುತ 


ಬಂದಾ ನೋಡೇ ಭಿಕ್ಷಕೆ ಗುರುರಾಯಾ
ಭವಬಂಧ ಕಳೆವ ಈತನೇ ಮಹನೀಯಾ ||

ಕಾಷಾಯಾಂಬರಧಾರೀ ಹದಿಹರಯದ ಮನೋಹಾರೀ
ದಂಡಕಮಂಡಲ ಪಿಡಿದು ರುದ್ರಾಕ್ಷಿ ಮಾಲೆ ಧರಿಸೀ ||

ಭವತೀ ಭಿಕ್ಷಾಂ ದೇಹೀ ಎನುತಾ ಮುಗುಳೂ ನಗುತಾ
ಬಡವರಾ ಮನೆಗೇ ಭಾಗ್ಯಾವ ತರುವೇನೆನುತಾ ||

ಜಗದಾ ಹಸಿವಾ ನೀಗಿಸೋ ಜಗದೋದ್ದಾರಕ ಗುರು
ಜಗದಾ ಕಲ್ಯಾಣಕೆ ಸಾಧು ರೂಪವಾ ಧರಿಸೀ ||

ಅಂಬಾಸುತನ ಅಂತರಂಗಾದ ಮನಮನೆಗೇ
ಅಚಿಂತ್ಯ ರೂಪಾ ದತ್ತಾತ್ರೇಯನು ತಾನೇ ||

No comments:

Post a Comment