ಒಟ್ಟು ನೋಟಗಳು

Wednesday, June 7, 2017

ಗುರುನಾಥ ಗಾನಾಮೃತ 

ಎಲ್ಲೆಲ್ಲಿ ನೋಡಿದರಲ್ಲಲ್ಲಿ ಗುರುನಾಥಾ
ರಚನೆ: ಅಂಬಾಸುತ 


ಎಲ್ಲೆಲ್ಲಿ ನೋಡಿದರಲ್ಲಲ್ಲಿ ಗುರುನಾಥಾ
ಎನ್ನಲ್ಲಿ ಗುರುನಾಥಾ ಪರರೊಳೂ ಗುರುನಾಥಾ ||


ತಂದೆ ಗುರುನಾಥಾ ಎನ್ನ ತಾಯೀ ಗುರುನಾಥಾ
ಬಂಧು ಗುರುನಾಥಾ ಎನಗೇ ಬಳಗಾ ಗುರುನಾಥಾ||


ಗುರು ಗುರುನಾಥಾ ಎನ್ನ ದೈವಾ ಗುರುನಾಥಾ
ಭಾವ ಗುರುನಾಥಾ ಎನ್ನಾತ್ಮ ಗುರುನಾಥಾ ||


ಆದಿ ಗುರುನಾಥಾ ಅಂತ್ಯಾ ಗುರುನಾಥಾ
ಅಗಣಿತಗುಣ ಮಹಿಮಾ ಎನ್ನಾ ಗುರುನಾಥಾ||

ಕಾರ್ಯ ಗುರುನಾಥಾ ಕಾರಣ ಗುರುನಾಥಾ
ಕರ್ತೃ ಗುರುನಾಥಾ ಎನಗೇ ಕಾಮಧೇನು ಗುರುನಾಥಾ ||

ಸುಖದೊಳು ಗುರುನಾಥಾ ದುಖದಿ ಗುರುನಾಥಾ
ಸಖ ಗುರುನಾಥಾ ಸರ್ವಸ್ವವೂ ಗುರುನಾಥಾ ||

ಸಖರಾಯಪುರವಾಸ ಗುರುನಾಥಾ
ಸದ್ಭಕ್ತ ಪರಿಪಾಲಕಾ ಸದ್ಗುರುನಾಥಾ ||

ಅಂಬಾಸುತಗೇ ಗುರುನಾಥಾ
ನಿಜಾನಂದವ ನೀಡಯ್ಯಾ ಸದ್ಗುರುನಾಥಾ ||

No comments:

Post a Comment