ಒಟ್ಟು ನೋಟಗಳು

Sunday, June 4, 2017

ಶ್ರೀ ಗುರು ಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 25


ಮನದಿ ಗರ್ವದಿ ಕುದಿವ ವಿಪ್ರರ । ಮುನಿ ತ್ರಿವಿಕ್ರಮ ಗುರುಕಡೆಗೆ ತಂ ।
ದನುಕಣಾ ಮದ ಮುರಿಯಲಿಕೆ ಇಪ್ಪತ್ತೈದರಲಿ ।। 25 ।।

ಗುರುಗಳು ಗಾಣಗಾಪುರದಲ್ಲಿರುವಾಗ ಕುಮಸಿಗೆ ಬಂದ ಇಬ್ಬರು ಮದೋನ್ಮತ್ತ ವೇದ ಪಂಡಿತರು ಬಂದು 'ನಮ್ಮೊಂದಿಗೆ ವೇದದ ಬಗ್ಗೆ ವಾದ ಮಾಡಿರಿ, ಇಲ್ಲವೇ ಸೋತೆವೆಂದು ಬರೆದುಕೊಡಿ, ಇದು ರಾಜನು ನಮಗೆ ನೀಡಿದ ಹಕ್ಕು' ಎಂದು ವಾದಿಸಿದಾಗ - 'ಯತಿಗಳು ನಾವು, ನಮಗೆ ಸೋಲು ಗೆಲುವು ಎರಡೂ ಒಂದೇ. ವೇದ ವಾದಕ್ಕಾಗಿಲ್ಲ' ಎಂದು ಎಷ್ಟು ತಿಳಿಹೇಳಿದರೂ ಕೇಳದಿದ್ದಾಗ, ಗಾಣಗಾಪುರಕ್ಕೆ ತಮ್ಮ ಗುರುಗಳ ಬಳಿಗೆ ಆ ಮದೋನ್ಮತ್ತ ವೇದ ಪಂಡಿತರನ್ನು ತ್ರಿವಿಕ್ರಮರು ಕರೆತರುತ್ತಾರೆ. ಯತಿಗಳನ್ನು ನಡೆಸಿಕೊಂಡು, ತಾವು ಪಲ್ಲಕ್ಕಿಯ ಮೇಲೆ ಕುಳಿತು ಮಹಾಪರಾಧ ಮಾಡಿದ ಆ ಪಂಡಿತರು ತಮ್ಮ ಸಾವನ್ನು ತಾವೇ ತಂದುಕೊಂಡಿದ್ದರು. 

ಗಾಣಗಾಪುರದಲ್ಲಿ ಶ್ರೀ ಗುರುಗಳು 'ಆತ್ಮಪ್ರಶಂಸೆ ಒಳ್ಳೆಯದಲ್ಲ, ವೇದದ ವಾದ ಬೇಡ, ಅದು ಕೇಡಿಗೆ ಮೂಲ' ಎಂದರೂ ಕೇಳದಿದ್ದಾಗ ಅವರ ಆಸೆ ಪೂರೈಸುವ ವ್ಯವಸ್ಥೆ ಮಾಡುವುದು ಇಪ್ಪತ್ತೈದರಲ್ಲಿ ಬರುತ್ತದೆ. 

ಮುಂದುವರಿಯುವುದು...

No comments:

Post a Comment