ಶ್ರೀ ವೇಂಕಟಾಚಲ ಗುರುಮಹಾರಾಜರ ಆರಾಧನಾ ಮಹೋತ್ಸವದ ಪ್ರಯುಕ್ತ ಶ್ರೀ ನಾರಾಯಣ ಯೋಗೀಂದ್ರ ಸರಸ್ವತಿ ಅಧಿಷ್ಟಾನಂ ಟ್ರಸ್ಟ್ ನ ವತಿಯಿಂದ 1ನೇ ಜುಲೈ 2017 ಮತ್ತು 2ನೇ ಜುಲೈ 2017 ರಂದು ಬಾಣಾವರದಿಂದ ಸಖರಾಯಪಟ್ಟಣದವರೆಗೆ ಪಾದಯಾತ್ರೆ ಕಾರ್ಯಕ್ರಮ
ನಮ್ಮ ಸದ್ಗುರುಗಳಾದ ಶ್ರೀ ವೇಂಕಟಾಚಲ ಗುರುಮಹಾರಾಜರ ಆರಾದನಾ ಮಹೋತ್ಸವದ ಪ್ರಯುಕ್ತ ಬಾಣಾವರದ ಶ್ರೀ ನಾರಾಯಣ ಯೋಗೀಂದ್ರ ಸರಸ್ವತಿ ಪರಮಹಂಸರ ಅಧಿಷ್ಟಾನದಿಂದ ಸಖರಾಯಪಟ್ಟಣದಲ್ಲಿರುವ ಸದ್ಗುರುಗಳ ಅಧಿಷ್ಟಾನದವರೆಗೂ ಪಾದಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಾದಯಾತ್ರೆಯ ವಿವರಗಳು ಈ ಕೆಳಗಿನಂತಿವೆ.
ಶನಿವಾರ ಅಂದರೆ ದಿನಾಂಕ 1ನೇ ಜುಲೈ 2017 ಸಂಜೆ 4 ಗಂಟೆಗೆ ಬಾಣಾವರದ ಅಧಿಷ್ಟಾನದಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ನಂತರ ಶ್ರೀಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರ ದರ್ಶನ ಪಡೆದು ಪಾದಯಾತ್ರೆ ಸಖರಾಯಪಟ್ಟಣದೆಡೆಗೆ ಪ್ರಾರಂಭವಾಗುತ್ತದೆ. ಶನಿವಾರ ಸರಿ ಸುಮಾರು 15ಕಿ.ಮೀ ಕ್ರಮಿಸಿ ಓಚಿಹಳ್ಳಿ ಕ್ರಾಸ್ ನಲ್ಲಿ ಬಿಡಾರ ಹೂಡಲಾಗುತ್ತದೆ. ಭಾನುವಾರ, ಅಂದರೆ 2ನೇ ಜುಲೈ 2017 ರಂದು ಬೆಳಿಗ್ಗೆ ಕಾಕಡಾ ಆರತಿ ಮತ್ತು ಪಾರ್ಥಿವೇಶ್ವರ ಪೂಜೆ ಸಂಪನ್ನಗೊಳಿಸಿ ಬೆಳಿಗ್ಗೆ 5 ಗಂಟೆಗೆ ಪಾದಯಾತ್ರೆ ಮುಂದುವರೆಯುತ್ತದೆ. ಸಖರಾಯಪಟ್ಟಣ ತಲುಪಿದ ನಂತರ ಸದ್ಗುರುಗಳ ಅಧಿಷ್ಟಾನದಲ್ಲಿ ಪಾದಯಾತ್ರೆ ಸಮರ್ಪಿಸಿ, ಭಜನೆಯೊಂದಿಗೆ ಪಾದಯಾತ್ರೆ ಕಾರ್ಯಕ್ರಮ ಸುಸಂಪನ್ನವಾಗುತ್ತದೆ. ಪಾದಯಾತ್ರಿಕರಿಗೆ ದಾರಿ ಮಧ್ಯೇ ಬೇಕಾಗುವ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ವಾತಾವರಣ ತಂಪಾಗಿರುವುದರಿಂದ ಪಾದಯಾತ್ರಿಗಳು ಬೆಚ್ಚನೆಯ ವಸ್ತ್ರಗಳನ್ನು ಮತ್ತು ಟಾರ್ಚ್ ಅನ್ನು ತರಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಶ್ರೀಹರ್ಷ ಹರಿಹರಪುರ: 89711 25996
ಶ್ರೀ ನಾಗರಾಜ್ ಜಾವಗಲ್: 90359 35685
ಸದ್ಗುರುನಾಥ ಮಹಾರಾಜ್ ಕೀ ಜೈ
No comments:
Post a Comment