ಒಟ್ಟು ನೋಟಗಳು

Tuesday, June 13, 2017

ಗುರುನಾಥ ಗಾನಾಮೃತ 

ಮಂಗಳಂ ಸಖರಾಯಪುರವಾಸ ಸದ್ಗುರುನಾಥಾ ಸದ್ಗುರುನಾಥಾ
ರಚನೆ: ಅಂಬಾಸುತ 



ಮಂಗಳಂ ಸಖರಾಯಪುರವಾಸ ಸದ್ಗುರುನಾಥಾ ಸದ್ಗುರುನಾಥಾ
ದೀನಪಾಲಕ ಭಕ್ತ ಹೃದಯೇಶಾ ಶ್ರೀವೇಂಕಟಾಚಲ ||ಪ||

ಸಚ್ಚಿದಾನಂದ ಸುಲಭ ಸಾಕಾರಾ| ಸತ್ಯ ಸ್ವರೂಪ|
ಮಿಥ್ಯ ವಿರೂಪಾ| ಚಿತ್ತವಾಸೀ ನೀ ಚಿದಂಬರಾ|
ಕಷ್ಟವೆಂದು ನಿಷ್ಟೆಯಿಂದ ಬೇಡಿದವಗಭೀಷ್ಟ ನೀಡುತಾ
ಧರ್ಮ ಮಾರ್ಗವ ಬೋಧಿಸುತ ಅಧರ್ಮವನು ಅಳಿಸುತಲಿರುವೇ || ೧ ||

ಸತ್ವ ರಜ ತಮ ಗುಣವ ಮೀರ್ದವನೇ | ತ್ರೈಮೂರ್ತಿ ರೂಪಾ|
ದತ್ತ ಸ್ವರೂಪಾ| ಉತ್ತಮೋತ್ತಮ ತತ್ತ್ವ ಪೂರಿತನೇ |
ಅಹಂಭಾವವ ಕಳೆದು ಭಕ್ತಗೆ ಸೋಹಂಭಾವವ ನೀಡಿ ಸಲಹೀ
ಸಾಧನೆಯ ದಾರಿಯನು ತೋರುತ ಸ್ವಾನುಭವವ ನೀಡಿದವನೇ ।। ೨ ।।

ಅವಗುಣಗಳ ಅಳಿಸೊ ಪರಮಾತ್ಮಾ | ನೀ ಅವಧೂತಾ|
ನೀ ಅವಧೂತ| ಆದ್ಯಂತ ರಹಿತ ಜಗದಾತ್ಮಾ||
ಅಳಿಸಿ ನಗಿಸುತ ಅಂತರಂಗದ ಕೊಳೆಯ ತೊಳೆಯುವೆ ಅನವರತ
ಅಂಬಾಸುತನಾ ಪಾಲಿಸೋ ಅಜಹರಿಹರ ರೂಪಾ ।। ೩ ।।

No comments:

Post a Comment