ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 22
ಬಡವನಲಿ ಭಿಕ್ಷೆಯನು ಬೇಡುತ । ಹಡೆಯದಿಹ ಮುದಿ ಎಮ್ಮೆ ಹಾಲನು ।
ಒಡನೆ ಹಿಂಡಿಸಿದನು ಗುರುವು ಇಪ್ಪತ್ತೆರಡರಲಿ ।। 22 ।।
ಗಾಣಗಾಪುರದಲ್ಲಿ ಗುರುಗಳು ಇದ್ದರು. ಆ ಊರಿನಲ್ಲಿ ಒಬ್ಬ ವೇದಶಾಸ್ತ್ರ ಸಂಪನ್ನನಾದ ಬಡವನೊಬ್ಬನಿದ್ದನು. ಆತನಿಗೆ ಆದಾಯದ ಮೂಲವಾಗಿ ಒಂದು ಬರಡು ಗೊಡ್ಡೆಮ್ಮೆಯು ಮನೆಯಲ್ಲಿತ್ತು. ಅದನ್ನು ಬಾಡಿಗೆಗೆ ಕೊಟ್ಟು ಜೀವನ ಸಾಗಿಸುತ್ತಿದ್ದರು. ಕರುಣಾಶಾಲಿಯಾದ ಗುರುವು ಆ ಬಡ ಬ್ರಾಹ್ಮಣನ ಮನೆಗೆ ಒಂದು ದಿನ ಭಿಕ್ಷೆಗೆ ಹೋದರು. ಬಾಗಿಲಿಗೆ ಬಂದ ಗುರುವನ್ನು ಸ್ವಾಗತಿಸಿ ನಮಿಸಿದ ಗೃಹಿಣಿಗೆ, ಅತಿಥಿಗೆ ಕೊಡಲು ಏನೂ ಇಲ್ಲದ ವಿಚಾರ ಚಿಂತೆಗೀಡು ಮಾಡಿತು. ಇದನ್ನರಿತ ಗುರುಗಳು, ಏನಮ್ಮ ಮನೆಯಲ್ಲಿ ಎಮ್ಮೆ ಇಟ್ಟುಕೊಂಡು ಹಾಲು ಕೊಡದೆ ಚಿಂತಿಸುವೆಯಲ್ಲಾ, ಹಾಲು ಕರೆದುಕೊಡು ಎಂದರು. ಗುರುವಾಕ್ಯದಲ್ಲಿ ನಂಬಿಕೆ ಇದ್ದ ಆ ತಾಯಿ ಗುರುವನ್ನು ನೆನೆದು ಹಾಲು ಕರೆಯಲು, ಕಾರು ಹಾಕದ ಬರಡೆಮ್ಮೆ ತಂಬಿಗೆ ತುಂಬಾ ಹಾಲು ನೀಡಿತು. ಆಕೆ ಆಶ್ಚರ್ಯ ಭಕ್ತಿಯಿಂದ ಗುರುವಿಗೆ ಅದನ್ನು ಅರ್ಪಿಸಿದಳು. ಮುಂದೆ ಬಾಡಿಗೆಗೆ ಎಮ್ಮೆಯನ್ನು ಕೇಳಲು ಬಂದ ಜನರು ಅದು ಹಾಲು ನೀಡುತ್ತಿರುವುದನ್ನು, ಗುರುಕೃಪಾ ಚಮತ್ಕಾರವನ್ನು ಅರಿತ ವಿಚಾರ - ಇಪ್ಪತ್ತೆರಡನೆಯ ಅಧ್ಯಾಯದ ಸಾರ.
ಮುಂದುವರಿಯುವುದು...
No comments:
Post a Comment