ಗುರುನಾಥ ಗಾನಾಮೃತ
ಆರತಿ ಮಾಡಿರಮ್ಮಾ
ರಚನೆ: ಅಂಬಾಸುತ
ಆರತಿ ಮಾಡಿರಮ್ಮಾ
ಸದ್ಗುರು ಅವಧೂತ ಇವನಮ್ಮಾ ।। ಪ ।।
ಸಖರಾಯಪುರದೊಳು ಘನರೂಪ ತಾ ಧರಿಸೀ
ವೇಂಕಟಾಚಲನೆಂಬೋ ನಾಮದಿಂದಿರುವನಮ್ಮಾ ।। ಅ.ಪ ।।
ಆರನ್ನು ಮೀರಿರಮ್ಮಾ ಆನಂದ ಹೊಂದಿರಮ್ಮಾ
ಅಂತರಂಗದೊಳು ಅವನನ್ನ ಕುಳ್ಳಿರಿಸೀ
ಅತಿಶಯ ಪ್ರೇಮದಿ ಅಚ್ಯುತ ನೀನೆನುತಾ ।। ೧ ।।
ಗುರುವಾಕ್ಯ ನೆನೆಯಮ್ಮಾ ಅದ ಬಿಡದೇ ಪಾಲಿಸಿರಮ್ಮಾ
ಅರಿತರಿತು ಅರಿವಿನ ಆಲಯದ ಒಳಹೊಕ್ಕು
ಜ್ಞಾನ ಕಾಮಹರ ಪರಮೇಶ್ವರನೇ ನೀನೆನುತಾ ।। ೨ ।।
ಮಾತು ಮುತ್ತಾಗಲಮ್ಮಾ ಮನಸೀನ ಮೌನವೇ ಹಿತವು
ಮತ್ತೆ ಮತ್ತೆ ಗುರುಪಾದವ ನೆನೆನೆನೆದೂ
ಜ್ಞಾನದಾಯಕ ವಾಣಿಪತಿಯೇ ನೀನೆನುತಾ ।। ೩ ।।
ಸತ್ಸಂಗ ಮಾಡಿರಮ್ಮಾ ಸಮಚಿತ್ತದಿ ಬಾಳಿರಮ್ಮಾ
ಅಂಬಾಸುತನ ಅಂತರಂಗದೊಳಗೆ ನಿಂತೂ
ಸತ್ ಚಿತ್ ಆನಂದವ ನೀಡುವ ಗುರುವೆನುತಾ ।। ೪ ।।
No comments:
Post a Comment