ಗುರುನಾಥ ಗಾನಾಮೃತ
ಶ್ರೀ ಗುರುನಾಥಾ ಹೇ ವಿಧಾತಾ
ರಚನೆ: ಅಂಬಾಸುತ
ಶ್ರೀ ಗುರುನಾಥಾ ಹೇ ವಿಧಾತಾ
ಸರಿಸಮರುಂಟೇ ನಿನಗೇ ಅವಧೂತಾ ||
ಜೀವಧಾತಾ ಜಲವೂ ನೀನೂ
ದೇಹದಾಧಾರ ಉಸಿರೂ ನೀನೂ
ಪ್ರಾಣ ಉಳಿಸುವಾ ಅನ್ನವೂ ನೀನೂ ||
ಭೂಮಿ ನೀನೂ ಭಾಗ್ಯ ನೀನೂ
ಭರವಸೆ ನೀನೂ ಬಂಧು ನೀನೂ
ಕಣ್ಣಿಗೆ ಕಾಣುವಾ ಪ್ರತ್ಯಕ್ಷ ದೈವ ನೀನೂ
ಕಾರ್ಯ ಕಾರಣ ಕರ್ತೃವೂ ನೀನೂ ||
ಚರಾಚರದೊಳೂ ಅಡಗಿಹೆ ನೀನೂ
ಅಂಬಾಸುತನಾ ಚಿತ್ತಾಪಹಾರಕ ನೀನೂ
ಸಖರಾಯಪುರವಾಸ ಗುರುನಾಥಾ ನೀನೂ ||
No comments:
Post a Comment