ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 29
ಯತಿವರನು ಭಸ್ಮಪ್ರಭಾವವ । ಚತುರತನದಲಿ ಪೇಳಿ ರಕ್ಕಸ ।
ಕಥೆಯ ಪೇಳ್ಬನು ಇಪ್ಪತೊಂಬತ್ತರಲಿ ನೀ ನೋಡು || 29 ||
ಶ್ರೀ ಗುರುಗಳು ತ್ರಿವಿಕ್ರಮ ಭಾರತಿಯವರಿಗೆ ಭಸ್ಮ ಪ್ರಭಾವ ಎಂತಹದು, ಭಸ್ಮವನ್ನು ದೇಹದ ಯಾವ ಯಾವ ಭಾಗಕ್ಕೆ ಹೇಗೆ ಲೇಪಿಸಬೇಕೆಂಬುದನ್ನೆಲ್ಲಾ ತಿಳಿಸಿ, ಕೃತಯುಗದಲ್ಲಿದ್ದ ವಾಮದೇವರೆಂಬ ಮಹಾಯೋಗಿಯ ಕಥೆಯನ್ನು ತಿಳಿಸುತ್ತಾರೆ.
ಸರ್ವಾಂಗ ಭಸ್ಮ ಲೇಪಿಸಿಕೊಂಡು ಕಾಡಿನಲ್ಲಿ ಒಮ್ಮೆ ವಾಮದೇವರು ತಿರುಗುತ್ತಿರುವಾಗ ಬ್ರಹ್ಮರಾಕ್ಷಸನೋರ್ವನು ತಿನ್ನಲು ತನಗೆ ಆಹಾರ ಸಿಕ್ಕಿತೆಂದು ಬಂದು ಬಾಯಿ ಹಚ್ಚಿದನು. ವಾಮದೇವರ ಮೈಮೇಲಿನ ವಿಭೂತಿ ರಾಕ್ಷಸನಿಗೆ ತಾಗುತ್ತಿದ್ದಂತೆ ಆತನಿಗೆ ಜ್ಞಾನೋದಯವಾಗಿ, ಇಪ್ಪತೈದು ಜನ್ಮಗಳ ನೆನಪಾಯಿತು. ಗುರುವಿಗೆ ಶರಣಾದ ರಾಕ್ಷಸ ದಿವ್ಯ ದೇಹವನ್ನು ಪಡೆದನು. ದೇವತೆಗಳು ಅವನನ್ನು ವಿಮಾನದಲ್ಲಿ ಕೂಡಿಸಿಕೊಂಡು ಹೋಗುವ ವಿಚಾರ ಇಪ್ಪತ್ತೊಂಬತ್ತನೆಯ ಅಧ್ಯಾಯದಲ್ಲಿ ಬರುತ್ತದೆ.
ಮುಂದುವರಿಯುವುದು...
No comments:
Post a Comment