ಒಟ್ಟು ನೋಟಗಳು

Friday, June 9, 2017

ಗುರುನಾಥ ಗಾನಾಮೃತ 

ಕಣ್ತೆರೆಸಲೂ ಬಾರೋ ಅವಧೂತಾ
ರಚನೆ: ಅಂಬಾಸುತ 


ಕಣ್ತೆರೆಸಲೂ ಬಾರೋ ಅವಧೂತಾ
ಎನ್ನನುದ್ಧರಿಸಲೂ ಬಾರೋ ಅವಧೂತಾ ||


ಅನಾಥ ಭಾವ ಕಾಡಿದೆ ಅವಧೂತಾ
ಎನಗೇ ಆಶ್ರಯ ನೀಡೋ ಅವಧೂತಾ ||


ಆದ್ಯಂತರಹಿತಾ ನೀ ಅವಧೂತಾ
ನಿಜಾನಂದವಾ ನೀಡೆನಗೇ ಅವಧೂತಾ ||


ನಿನ್ನಾ ನಂಬಿ ಬಂದಿಹೆನೂ ಅವಧೂತಾ
ಎನ್ನಾ ಕರುಣದೀ ಕಾಯೋ ಅವಧೂತಾ ||


ಎನ್ನಾ ಪಾಪವ ಧಹಿಸೋ ಅವಧೂತಾ
ಎನ್ನ ಪರಿಶುದ್ಧಗೊಳಿಸೋ ಅವಧೂತಾ ||


ಭಕ್ತಿ ಎಂಬುದಾ ತಿಳಿಸೋ ಅವಧೂತಾ
ಸದ್ಭಕ್ತನನ್ನಾಗಿಸೋ ಅವಧೂತಾ||


ಮುಕ್ತಿಮಾರ್ಗವಾ ತೋರಿಸೋ ಅವಧೂತಾ
ಎನ್ನಾ ಮುಕ್ತನನ್ನಾಗಿಸೋ ಅವಧೂತಾ ||


ಅಂಬಾಸುತನಾ ನಿನ್ನ ದಾಸ ಅವಧೂತಾ
ನಿನ್ನ ಪಾದಧೂಳಿನೊಳೆನ್ನಾ ಸೇರಿಸೋ ಅವಧೂತಾ||

No comments:

Post a Comment