ಒಟ್ಟು ನೋಟಗಳು

Friday, June 16, 2017

ಶ್ರೀ ಗುರು ಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 36


ತರುಣಿಯೊಡನೆ ಪರಾನ್ನಭೋಜನ । ಕಿರದೆಹೋದ ದ್ವಿಜಗೆ ಕರ್ಮದ ।
ಪರಿಯ ಮೂವತ್ತಾರರಲಿ ಹೇಳಿದನು ಶ್ರೀ ಗುರುವು   || 36 ||

ನಾಮಧಾರಕನು ಸಿದ್ಧಮುನಿಯ ಚರಣಕ್ಕೆರಗಿ ಗುರುಚರಿತ ಅಮೃತವನ್ನು ಮತ್ತೂ ತಿಳಿಸಬೇಕೆಂದು ಕೇಳಿದಾಗ - ಗಂಧರ್ವಪುರದಲ್ಲಿದ್ದ ಒಬ್ಬ ಸಚ್ಚಾರಿತ್ರ ಬ್ರಾಹ್ಮಣನ ಕಥೆ ಹೇಳುತ್ತಾರೆ. ಪರಾನ್ನ ನಿಷೇಧಿಸಿದ ಆ ಬ್ರಾಹ್ಮಣನ ಮಡದಿಗೆ ನಿತ್ಯ ಗಾಣಗಾಪುರದಲ್ಲಿ ನಡೆದ ಅನ್ನದಾನದ ಊಟಕ್ಕೆ ಹೋಗಲು ಆಸೆಯಾಗುತ್ತದೆ. ಗಂಡನು ಒಪ್ಪದಾದಾಗ ಗುರುವಿನಿಂದ ಹೇಳಿಸಿ ಭೋಜನಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ನಾಯಿ, ನರಿಗಳು ಸಹ ಪಂಕ್ತಿಯಲ್ಲಿ ಉಣ್ಣುತ್ತಿರುವುದನ್ನು ನೋಡಿದ ಆಕೆ ಪಶ್ಚಾತ್ತಾಪಗೊಂಡು ಗಂಡನಲ್ಲಿ ಕ್ಷಮೆಯಾಚಿಸುತ್ತಾಳೆ. ಆಗ ಗುರುವು ವಿಪ್ರರ ಕರ್ತವ್ಯಗಳನ್ನು ತಿಳಿಹೇಳಿ ರಕ್ಷಿಸುವ ವಿಚಾರವು ಮೂವತ್ತಾರನೆಯ ಅಧ್ಯಾಯದ ಸಾರವಾಗಿದೆ. 

ಮುಂದುವರಿಯುವುದು...

No comments:

Post a Comment