ಒಟ್ಟು ನೋಟಗಳು

Friday, June 16, 2017

ಗುರುನಾಥ ಗಾನಾಮೃತ 

ತಪ್ಪನ್ನು ಮನ್ನಿಸೋ ಗುರುರಾಯಾ
ರಚನೆ: ಅಂಬಾಸುತ 


ತಪ್ಪನ್ನು ಮನ್ನಿಸೋ ಗುರುರಾಯಾ
ಎನ್ನಪ್ಪ ನೀ ಕಾಯೋ ಮಹನೀಯಾ ||ಪ||
ಅರಿಯದಾದೆನೋ ನಿನ್ನಿರುವಿಕೆಯಾ
ಮರೆತು ನಾ ಗೈದೆ ಮಹಾಪರಾಧವಾ ||ಅ.ಪ||

ಧರ್ಮ ಮಾರ್ಗವ ಬಿಟ್ಟು ಅಧರ್ಮ ಮಾರ್ಗ ಹಿಡಿದೆ
ಧನಕನಕ ಕೂಡಿಡಲು ದಾರಿತಪ್ಪಿ ನೆಡೆದೆ
ತತ್ವ ಚಿಂತನೆ ಬಿಟ್ಟೆ ತುತ್ತಿಗಾಗಿ ಕಾಲ ಕಳೆದೆ
ಕಾಮಾದಿ ದಾನವರ ದಾಸನಾಗೀ ನಿಂತೆ ||೧||

ನಿನ್ನ ನಾಮ ಭಜಿಸಲಿಲ್ಲಾ ನಿನ್ನಾ ಕೀರ್ತಿ ಪಾಡಲಿಲ್ಲಾ
ನೀನೆಂಬುವವನಿಹೆ ಎಂಬುದನೆ ನಂಬಲಿಲ್ಲಾ
ನಿನ್ನ ಪಾದ ಸೇವೆಯ ಮಾಡಲಿಲ್ಲವೋ ಗುರುವೇ
ನಿನ್ನ ಪದ ವಾಕ್ಯಗಳ ನೆನೆಯಾಲಿಲ್ಲವೋ ಪ್ರಭುವೇ ||೨||

ತಂದೆ ತಾಯಿಯು ನೀನೇ ಬಂದು ಬಳಗವೂ ನೀನೇ
ಕಂದ ನಾನೆಂದು ಈಗ ಬಂದಿರುವೆನೋ ಗುರುವೇ
ಶಿಕ್ಷೆಯ ನೀಡಿಯಾದರೂ ರಕ್ಷೆಯ ನೀಡೋ ಪ್ರಭುವೇ
ನಿನ್ನಾ ಕಕ್ಷೆಯ ಒಳಗೆ ಎನ್ನಾನಿರಿಸೋ ದೊರೆಯೇ ||೩||

ಸಖರಾಯಪುರವಾಸ ಶ್ರೀ ಸದ್ಗುರುನಾಥಾ
ಎನ್ನಾ ತಪ್ಪನ್ನು ಮನ್ನಿಸೋ ಹೇ ಅವಧೂತಾ
ಒಪ್ಪವಾಗೀ ಅಪ್ಪಾ ನಿನ್ನಾ ಅಡಿಯಲ್ಲಿರುವೇ
ಅಂಬಾಸುತಗೆ ಕ್ಷಮೆಯನಿತ್ತೂ ಪೊರೆಯೋ ಗುರುವೇ ||೪||

No comments:

Post a Comment