ಒಟ್ಟು ನೋಟಗಳು

Saturday, June 17, 2017

ಶ್ರೀ ಗುರು ಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 37


ಪರಿಪರಿಯ ಆಹ್ನಿಕ ಪ್ರಕಾರವ । ನರುಹತಾ ವಿಪ್ರನಿಗೆ ಮೆಚ್ಚುತ ।
ವರವನಿತ್ತನು ಗುರುವು ಮೂವತ್ತೇಳರಲಿ ತಿಳಿಯೇ    || 37 ||

ಶ್ರೀ ಗುರುಗಳು ಈ ಅಧ್ಯಾಯ ಪೂರ್ತಿಯಾಗಿ ಬ್ರಾಹ್ಮಣನ ದೈನಂದಿನ ಧಾರ್ಮಿಕ ಕಾರ್ಯಗಳ ಬಗ್ಗೆ, ಸ್ನಾನ ಸಂಧ್ಯಾ, ಪೂಜಾ ವಿಧಾನಗಳ ಬಗ್ಗೆ, ಮನೆಗೆ ಬಂದ ಅತಿಥಿಗಳ ಆದರೆ ಸತ್ಕಾರಗಳ ಬಗ್ಗೆ, ಬ್ರಾಹ್ಮಣನ ನೇಮನಿಷ್ಠೆಗಳ ಬಗ್ಗೆ ತಿಳಿಸುತ್ತಾರೆ. ವೇದಾಭ್ಯಾಸ, ಸದಾಚಾರದಲ್ಲಿ ನಡೆಯುವ ಬ್ರಾಹ್ಮಣನ ಮನೆಯಲ್ಲಿ ನಿರತ ಲಕ್ಷ್ಮೀ ವಾಸವಿರುತ್ತದೆ. ಯಾವುದಕ್ಕೂ ಕೊರತೆ ಇರುವುದಿಲ್ಲವೆಂದು ತಿಳಿಸುತ್ತಾರೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಆಶ್ರಮಗಳ ಪಾಲನೆ ಮಾಡಬೇಕು. ಹೀಗೆಂದು ಗುರುಗಳು ತಮ್ಮ ಶಿಷ್ಯರಿಗೆ ತಿಳಿಸುವುದೇ ಮೂವತ್ತೇಳನೆಯ ಅಧ್ಯಾಯ. 

ಮುಂದುವರಿಯುವುದು...

No comments:

Post a Comment