ಒಟ್ಟು ನೋಟಗಳು

Sunday, June 18, 2017

ಶ್ರೀ ಗುರು ಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 38


ಮೂರು ಜನರಿಗೆ ಸಾಲುವಡಿಗೆಯ । ನೂರು ಮಂದಿಯನ್ನೆಲ್ಲನುಣಿಸಿದ ।
ಕಾರಣಿಕ ಗುರುರಾಯ ಮೂವತ್ತೆಂಟರಲಿ ನೋಡೆ  || 38 ||

ಭಾಸ್ಕರನೆಂಬ ಬ್ರಾಹ್ಮಣನು ಗುರುಗಳ ಮಹಿಮೆಯನ್ನು ಕೇಳಿ, ಗಾಣಗಾಪುರಕ್ಕೆ ಬಂದು ತನ್ನ ಬಳಿ ಇರುವ ನಾಲ್ಕು ಜನರಿಗಾಗುವ ಪದಾರ್ಥದಿಂದ ಗುರುವಿಗೆ ಭಿಕ್ಷೆ ನೀಡುವ ತನ್ನ ಮನದ ಇಚ್ಛೆಯನ್ನು ಭಕ್ತಿಯಿಂದ ಪ್ರಕಟಿಸಿದನು. ಆದರೆ ದಿನದಿನವೂ ದೊಡ್ಡ ಸಂತರ್ಪಣೆಗಳು ನಡೆದಿರುವುದರಿಂದ ಅವನಿಗೆ ಅವಕಾಶವೇ ಸಿಗದಾಯಿತು. ಇತರ ಭಕ್ತರು ಭಾಸ್ಕರನನ್ನು ಅಪಹಾಸ್ಯ ಮಾಡತೊಡಗಿದರು. ಅದೊಂದು ದಿನ ಗುರುಗಳು ಭಾಸ್ಕರನಿಗೆ ಭಿಕ್ಷೆ ಮಾಡಿಸಲು ಹೇಳಿದರು. ನಾಲ್ಕು ಜನರಿಗೆ ಆಗುವ ಪದಾರ್ಥಗಳಿದ್ದರೂ ಗುರುಗಳು ತಮ್ಮ ಸಹಸ್ರಾರು ಶಿಷ್ಯರನ್ನೆಲ್ಲಾ ಊಟಕ್ಕೆ ಕರೆದರು. ನಾಲ್ಕು ಸಾವಿರ ಜನಗಳ ಊಟವಾಯಿತು. ಅಂದು ಗುರುಕೃಪೆಯಿಂದ ಇನ್ನೂ ಉಳಿದ ಪದಾರ್ಥಗಳನ್ನು ಪ್ರಾಣಿಗಳಿಗೆ, ಜಲಚರಗಳಿಗೆ ಹಾಕಲಾಯಿತು. ಗುರುಕೃಪೆಯು ಅಕ್ಷಯವಾಗಿಸಿದ ಅಡುಗೆಯ ಬಗ್ಗೆ ಜನರು ಅಚ್ಚರಿಪಟ್ಟರೆಂಬ ವಿಚಾರ ಮೂವತ್ತೆಂಟನೆಯ ಅಧ್ಯಾಯದಲ್ಲಿ ಬರುತ್ತದೆ. 

ಮುಂದುವರಿಯುವುದು...

No comments:

Post a Comment