ಒಟ್ಟು ನೋಟಗಳು

Monday, June 19, 2017

ಗುರುನಾಥ ಗಾನಾಮೃತ 
ನೀ ಅನಾಥ ನಾಥನೋ ಸದ್ಗುರುನಾಥಾ
ರಚನೆ: ಅಂಬಾಸುತ 


ನೀ ಅನಾಥ ನಾಥನೋ ಸದ್ಗುರುನಾಥಾ
ನಂಬಿದವರ ಪೊರೆಯುವವ ನೀ ಅವಧೂತಾ ||ಪ||

ಸ್ಥಿತಿ ಗತಿಗೇ ಕಾರಣಾ ಸದ್ಗುರುನಾಥಾ
ಸ್ಥಿತಪ್ರಜ್ಞೆಯ ನೀಡುವವ ನೀ ಅವಧೂತಾ
ಸಾಧಕರಿಗೆ ಸಾಧ್ಯನೂ ಸದ್ಗುರುನಾಥಾ
ಸಾತ್ವಿಕತೆಯ ಒಳಗಿರುವವ ನೀ ಅವಧೂತಾ ||೧||

ಚಿತ್ತವಾಸ ಚಿನುಮಯಾ ಸದ್ಗುರುನಾಥಾ
ಭಕ್ತಚಿತ್ತಾಪಹಾರಕ ನೀ ಅವಧೂತಾ
ಚೈತನ್ಯದಾಯಕಾ ಸದ್ಗುರುನಾಥಾ
ಚಂದ್ರಶೇಖರ ರೂಪಾ ನೀ ಅವಧೂತಾ ||೨||

ಕರುಣಾಪೂರಿತ ವದನಾ ಸದ್ಗುರುನಾಥಾ
ಕೈವಲ್ಯದಾಯಕ ನೀ ಅವಧೂತಾ
ಕಾರ್ಯಕಾರಣ ರೂಪಾ ಸದ್ಗುರುನಾಥಾ
ಕಾಮಧೇನು ಕಲ್ಪವೃಕ್ಷ ನೀ ಅವಧೂತಾ ||೩||

ಪುರುಷೋತ್ತಮ ಪರಾತ್ಪರಾ ಸದ್ಗುರುನಾಥಾ
ಪಾಪದಹನ ಪುಣ್ಯಪ್ರೇರಣ ನೀ ಅವಧೂತಾ
ಪರಮಾನಂದದಾಯಕ ಸದ್ಗುರುನಾಥಾ
ಪಾದ ಪಿಡಿವೆ ಪೊರೆಯೋ ನೀ ಅವಧೂತಾ ||೪||

ಅಂಬಾಸುತನಂತರಂಗ ವಾಸಾ ಗುರುನಾಥಾ
ಜಗದಂಬೆ ಪಾದವಾ ತೋರಿಸೊ ಅವಧೂತಾ||೫||

No comments:

Post a Comment