ಶ್ರೀ ಗುರುಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 39
ನಾರಿಗಂಗಾ ಬಂಜೆ ಮುದುಕಿಯ । ಚಾರುಪುತ್ರರ ಪಡೆದಳದರವಿ ।
ಚಾರ ಮೂವತ್ತೊಂಬತ್ತರಲಾ ಚೋದ್ಯವೇನೆಂಬೆ || 39 ||
ಗಾಣಗಾಪುರದಲ್ಲಿ ಒಬ್ಬ ಶಾಸ್ತ್ರಕೋವಿದ, ಗುರುಭಕ್ತ ಸೋಮನಾಥನೆಂಬುವ ದ್ವಿಜನಿದ್ದನು. ಆತನಿಗೆ ಅತಿ ಸಾಧ್ವಿಯಾದ, ನಿರಂತರ ಗುರುವನ್ನು ಪೂಜಿಸುವ ಸತಿ ಶಿರೋಮಣಿ ಗಂಗಾ ಎಂಬುವಳು ಹೆಂಡತಿಯು, ಅರವತ್ತು ವರ್ಷಗಳಾದರೂ ಮಕ್ಕಳಾಗದಾಗ ಆಕೆಯನ್ನು ಜನ ಬಂಜೆ ಎನ್ನುತ್ತಿದ್ದರು. ನಿತ್ಯ ಗುರುವಿನ ಸೇವೆ ಮಾಡಿ ಆರತಿ ಮಾಡುವ ಅವಳನ್ನು ಗುರುಗಳು ಏನು ಬೇಕೆಂದು ಕೇಳುತ್ತಾರೆ. ಆಕೆ ತನ್ನ ಮನದ ನೋವನ್ನು ಹೇಳಿಕೊಂಡಾಗ ಮುಂದಿನ ಜನುಮವೇಕೆ, ನಿತ್ಯ ನೀ ಮಾಡುವ ಭಕ್ತಿಯ ಆರತಿಗೆ ಮೆಚ್ಚಿದ್ದೇನೆ. ನಿನಗೆ ಒಬ್ಬ ಮಗಳಾಗುತ್ತಾಳೆ ಎನ್ನುತ್ತಾರೆ. ಗುರುವಿಗೆ ನಮಿಸಿ ಈ ಮಾತು ನೆನಪಿಡಲು ಸೆರಗಿಗೆ ಗಂಟು ಬಿಗಿಯುತ್ತಾಳೆ. ಈ ವಿಷಯ ತಿಳಿದ ಕೆಲವರು "ಮುಟ್ಟು ನಿಂತ ಈಕೆ ಮಗುವಿಗೆ ಜನ್ಮ ಕೊಡುತ್ತಾಳಾ" ಎಂದು ಹಾಸ್ಯ ಮಾಡಿದರೆ, ಮತ್ತೆ ಕೆಲವರು "ಗುರುಕೃಪೆಗೆ ಅಸಾಧ್ಯ ಯಾವುದೂ ಇಲ್ಲ" ಎನ್ನುತ್ತಾರೆ. ಗುರುಕೃಪೆ, ಅವಳ ದೃಢ ಭಕ್ತಿಗೆ ಅನುಸಾರವಾಗಿ ಆಕೆ ಗರ್ಭಿಣಿಯಾಗುತ್ತಾಳೆ. ಊರವರೆಲ್ಲಾ ಸಂಭ್ರಮದಿಂದ ಸೀಮಂತ ಮಾಡುವ ವಿಚಾರಗಳು ಮೂವತ್ತೊಂಬತ್ತನೆಯ ಅಧ್ಯಾಯದಲ್ಲಿದೆ.
ಮುಂದುವರಿಯುವುದು...
No comments:
Post a Comment