ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 23
ಪೊಡವಿಪತಿ ಗಾಣಗದಿ ಗುರುವಿಗೆ । ಕೊಡಲು ಮಠವನು ಬಂದು ನಿಂತನು ।
ವೊಡನೆ ಇಪ್ಪತ್ತಮೂರರಲಿ ಪೈಶಾಚ ಮೋಚನವು ।। 23 ।।
ಮುಂದೆ ಶ್ರೀಗುರುಗಳ ವಿಚಾರ ಗಾಣಗಾಪುರದ ಗ್ರಾಮಾಧಿಕಾರಿಗೆ ತಿಳಿದು, ಆತನು ಗುರುಗಳ ಬಳಿ ಬಂದು "ತಾವು ನಮ್ಮ ಊರಿಗೆ ಬರಬೇಕೆಂದು ಭಕ್ತಿಯಿಂದ ಬೇಡಿ, ವೈಭವದಿಂದ ಊರಿಗೆ ಕರೆತಂದನು. ಊರ ಬಳಿ ಇರುವ ಅಶ್ವತ್ಥ ವೃಕ್ಷದ ಬಳಿ ಬಂದಾಗ, ಅದರಲ್ಲಿದ್ದ ಬ್ರಹ್ಮರಾಕ್ಷಸವು ಗುರುವಿನೆದುರು ಪ್ರಕಟವಾಗಿ, ವಂದಿಸಿ ತನಗೆ ಮುಕ್ತಿಯನ್ನು ಕೊಡಬೇಕೆಂದು ಬೇಡಿ ಮುಕ್ತವಾಯಿತು. ಗುರುಗಳು ತಮಗೆ ಇಲ್ಲಿಯೇ ಒಂದು ಮಠ ಕಟ್ಟಿಸಿಕೊಡಬೇಕೆಂದು ತಿಳಿಸಿದರು. ಮುಂದೆ ಅಲ್ಲಿಗೆ ಬರುವ ನಾನಾ ರೀತಿಯ ಭಕ್ತರ ನೋವನ್ನು ಪರಿಹರಿಸುತ್ತ ಗುರುಗಳು ಅಲ್ಲಿಯೇ ಇದ್ದು, ನಿತ್ಯ ಸಂಗಮಕ್ಕೆ ಬಂದು ಸ್ನಾನಾದಿಗಳನ್ನು ಮಾಡಿ ಬರುವ ವಿಚಾರವು ಇಪ್ಪತ್ತಮೂರನೆಯ ಅಧ್ಯಾಯದಲ್ಲಿ ಬರುತ್ತದೆ.
ಮುಂದುವರಿಯುವುದು...
No comments:
Post a Comment