ಗುರುನಾಥ ಗಾನಾಮೃತ
ದಾಸನಾನಾಗಿಹೆನಯ್ಯ ದಾರಿ ತೋರೋ ಗುರುವೇ
ರಚನೆ: ಅಂಬಾಸುತ
ದಾಸನಾನಾಗಿಹೆನಯ್ಯ ದಾರಿ ತೋರೋ ಗುರುವೇ
ದೀನತನದಿ ನಿನ್ನಡಿಯನಾಶ್ರಯಿಸಿರುವೇ ||ಪ||
ಬಣ್ಣಬಣ್ಣದ ಜಗದೊಳು ಬಂಧಿಯಾಗಿಹೆನಯ್ಯಾ
ಭಾವನೆಗಳ ಬೇಲಿಯೊಳು ಸಿಲುಕಿಕೊಂಡಿಹೆನಯ್ಯಾ
ಬಿಡುವೆನೆಂದರೂ ಬಿಡದಾ ವ್ಯಾಮೋಹವಿಹುದಯ್ಯಾ
ಬಡತನವಾದರೂ ಸರಿಯೇ ಬಾಧೆಯಾ ಪರಿಹರಿಸಯ್ಯಾ ||೧||
ನಷ್ಟದಾ ಜೀವನಾ ಇಷ್ಟದೀ ಹಂಬಲಿಸೀ
ಉತ್ಕೃಷ್ಟ ಮತಿ ನೀಡ್ವ ಉತ್ತಮೋತ್ತಮನಾ ಮರೆತೇ
ಒಂದಿಷ್ಟು ಕರುಣೆಯ ತೋರೀ ಉದ್ಧರಿಸಯ್ಯಾ ಗುರುವೇ ||೨||
ಆತಂಕ ಹೆಚ್ಚಿಸೀ ಅನ್ಯಾಯ ಮಾಡದಿರೂ
ಸರ್ವೋತ್ತಮ ಸದ್ಗುರು ಕೃಷ್ಣ ಯೋಗೀಂದ್ರಾ
ಸಲಹಯ್ಯ ಸಾಹುಕಾರ ಸೋತು ನಿನ್ನಡಿಯೊಳಿಹೆನೂ ||೩||
No comments:
Post a Comment