ಗುರುನಾಥ ಗಾನಾಮೃತ
ಗುರುನಾಥಾ ಗುರುನಾಥಾ ಸದ್ಗುರುನಾಥಾ ಗುರುನಾಥಾ
ರಚನೆ: ಅಂಬಾಸುತ
ಗುರುನಾಥಾ ಗುರುನಾಥಾ ಸದ್ಗುರುನಾಥಾ ಗುರುನಾಥಾ
ಗುರುನಾಥಾ ಗುರುನಾಥಾ ಶ್ರೀಗುರುನಾಥಾ ಗುರುನಾಥಾ||
ಆಪದ್ಭಾಂಧವ ಗುರುನಾಥಾ
ಅನಾಥ ರಕ್ಷಕ ಗುರುನಾಥಾ
ಆದ್ಯಂತ ರಹಿತಾ ಗುರುನಾಥಾ
ಅಗಣಿತಗುಣಗಣ ಗುರುನಾಥಾ||೪||
ಆನಂದರೂಪಾ ಗುರುನಾಥಾ
ಆತ್ಮೀಯ ಸಖ ನೀ ಗುರುನಾಥಾ
ಅಚ್ಯುತ ನೀನೇ ಗುರುನಾಥಾ||೮||
ಆತ್ಮೋದ್ಧಾರಕ ಗುರುನಾಥಾ
ಅಕಳಂಕ ಚರಿತ ಗುರುನಾಥಾ
ಅವಧೂತಾತ್ಮಕ ಗುರುನಾಥಾ||೧೨||
ಇಹಬಂಧನ ಹರ ಗುರುನಾಥಾ
ಈಶ್ವರ ರೂಪಾ ಗುರುನಾಥಾ
ಇಂಗಿತಜ್ಞ ಗುರುನಾಥಾ
ಇಷ್ಟಾರ್ಥದಾಯಕ ಗುರುನಾಥಾ||೧೬||
ಉಗ್ರಸ್ವರೂಪಾ ಗುರುನಾಥಾ
ಉಮಾಕಾಂತಾ ಗುರುನಾಥಾ
ಊರ್ಜಿತ ರೂಪಾ ಗುರುನಾಥಾ||೨೦||
ಉದ್ದಾರಕ ನೀ ಗುರುನಾಥಾ
ಉತ್ತಮೋತ್ತಮಾ ಗುರುನಾಥಾ
ಋಣಬಂಧಹರಾ ಗುರುನಾಥಾ
ಋಷಿ ಸ್ವರೂಪಾ ಗುರುನಾಥಾ ||೨೪||
ಋಷ್ಯಶೃಂಗ ಪ್ರಿಯ ಗುರುನಾಥಾ
ಋಗ್ವೇದ ಪ್ರಿಯ ಗುರುನಾಥಾ
ಋತು ಸಂಚಾಲಕ ಗುರುನಾಥಾ
ಋಣಾತ್ಮಕ ನಾಶಾ ಗುರುನಾಥಾ||೨೮||
ಏಕಾನೇಕಾ ಗುರುನಾಥಾ
ಏಕೈಕ ನಿಜಬಂಧು ಗುರುನಾಥಾ
ಐಶ್ವರ್ಯ ನೀನೇ ಗುರುನಾಥಾ
ಐಹಿಕ ಬಾಧಾಹರ ಗುರುನಾಥಾ||೩೨||
ಓಂಕಾರಪ್ರಿಯ ಗುರುನಾಥಾ
ಓಂಕಾರೋಪಾಸಕ ಗುರುನಾಥಾ
ಓಂಕಾರ ರೂಪ ಗುರುನಾಥಾ||೩೬||
ಔಚಿತ್ಯಪೂರ್ಣ ಗುರುನಾಥಾ
ಅಂಧಕ ನಾಶನ ಗುರುನಾಥಾ
ಅಂತರಂಗವಾಸೀ ಗುರುನಾಥಾ
ಅಂತ್ಯರಹಿತ ಶ್ರೀ ಗುರುನಾಥಾ||೪೦||
ಕಾಮಿತಾರ್ಥಪ್ರದ ಗುರುನಾಥಾ
ಕಾಮವಿಧೂರಾ ಗುರುನಾಥಾ
ಕಾರ್ಯ ಕಾರಣ ಗುರುನಾಥಾ
ಕಾಲಸ್ವರೂಪಾ ಗುರುನಾಥಾ ||೪೪||
ಖಗದೂಷಣ ಹರ ಗುರುನಾಥಾ
ಖಂಡಿತವಾದೀ ಗುರುನಾಥಾ
ಗರ್ವ ವಿನಾಶಕ ಗುರುನಾಥಾ
ಗಂಭೀರ ರೂಪಾ ಗುರುನಾಥಾ||೪೮||
ಗರಳ ವಿನಾಶಾ ಗುರುನಾಥಾ
ಗರುಡವಾಹನ ಗುರುನಾಥಾ
ಗಾನವಿಲೋಲಾ ಗುರುನಾಥಾ||೫೨||
ಗಂಧವಿಭೂಷಣ ಗುರುನಾಥಾ
ಗಂಡಾಂತರ ಹರ ಗುರುನಾಥಾ
ಗತಿದಾಯಕನೇ ಗುರುನಾಥಾ
ಗೀತಾ ಪ್ರಿಯನೇ ಗುರುನಾಥಾ||೫೬||
ಘಾತಕ ಹಾರೀ ಗುರುನಾಥಾ
ಚೈತನ್ಯ ರೂಪ ಗುರುನಾಥ
ಚಂದ್ರಶೇಖರ ಗುರುನಾಥಾ||೬೦||
ಚಿತ್ ಸ್ವರೂಪಾ ಗುರುನಾಥಾ
ಚಿಂತಾಹಾರೀ ಗುರುನಾಥಾ
ಚಿನ್ಮುದ್ರಾಂಕಿತ ಗುರುನಾಥಾ||೬೪||
ಚರಾಚರಾ ಗುರುನಾಥಾ
ಚಿನುಮಯ ಗುರುನಾಥಾ
ಚಿತ್ತಭ್ರಮಹಾ ಗುರುನಾಥಾ
ಚಿತ್ತಾಪಹಾರಕ ಗುರುನಾಥಾ||೬೮||
ಜಗದೋದ್ದಾರಕ ಗುರುನಾಥಾ
ಜಗನ್ನಾಥ ಗುರುನಾಥಾ
ಜನನಿಯು ನೀನೇ ಗುರುನಾಥಾ||೭೨||
ಜಾನ್ಹವಿ ರೂಪಾ ಗುರುನಾಥಾ
ಜಾನಕಿ ಕಾಂತಾ ಗುರುನಾಥಾ
ಜ್ಯೋತಿ ಸ್ವರೂಪ ಗುರುನಾಥಾ||೭೬||
ಡಂಭಕ ನಾಶನ ಗುರುನಾಥಾ
ತಂದೆ ತಾಯಿಯು ಗುರುನಾಥಾ
ತಾರ್ಕಿಕ ರೂಪಾ ಗುರುನಾಥಾ
ತಾರತಮ್ಯ ರಹಿತಾ ಗುರುನಾಥಾ||೮೦||
ದಾನವಾಂತಕ ಗುರುನಾಥಾ
ಧರಣೀಪಾಲ ಗುರುನಾಥಾ
ಧನಾತ್ಮಕ ಗುರುನಾಥಾ ||೮೪||
ದೀನಪರಿಪಾಲಕ ಗುರುನಾಥಾ
ದೀನೋದ್ಧಾರ ಗುರುನಾಥಾ
ನಾಮಾತೀತ ಗುರುನಾಥಾ
ನಾದೋಪಾಸಕ ಗುರುನಾಥ||೮೮||
ನರಕನಿವಾರಣ ಗುರುನಾಥ
ನರರೂಪ ಹರನೀ ಗುರುನಾಥಾ
ಪರಮ ಪಾವನ ಗುರುನಾಥ
ಪತಿತೋದ್ಧಾರಕ ಗುರುನಾಥಾ||೯೨||
ಪರಮಾತ್ಮಾ ಗುರುನಾಥಾ
ಫಲಪ್ರದ ಗುರುನಾಥ
ಬಂಧ ವಿನಾಶಾ ಗುರುನಾಥಾ
ಭವರೋಗ ಹರ ಗುರುನಾಥಾ||೯೪||
ಮಂತ್ರ ಸ್ವರೂಪಾ ಗುರುನಾಥ
ಮೋಹ ನಿವಾರಕ ಗುರುನಾಥಾ
ಮಲಹಾರಿ ನೀ ಗುರುನಾಥಾ||೯೮||
ಯೋಗಸ್ವರೂಪ ಗುರುನಾಥಾ
ರವಿಶಶಿ ನೇತ್ರಾ ಗುರುನಾಥಾ
ರಮಾ ರಮಣಾ ಗುರುನಾಥ ||೧೦೨||
ವರದಾಯಕನೇ ಗುರುನಾಥ
ವೇಂಕಟಾಚಲ ಗುರುನಾಥಾ
ಶ್ರೀಕಾರ ರೂಪಾ ಗುರುನಾಥಾ||೧೦೬||
ಸದ್ಭಕ್ತಪಾಲಕ ಗುರುನಾಥಾ ||೧೦೮||
ಗುರುನಾಥಾ ಗುರುನಾಥಾ ಸದ್ಗುರುನಾಥಾ ಗುರುನಾಥಾ
ಗುರುನಾಥಾ ಗುರುನಾಥಾ ಶ್ರೀ ಗುರುನಾಥಾ ಗುರುನಾಥಾ||
No comments:
Post a Comment