ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 27
ಹಾದಿನಡೆವಂತ್ಯಜನ ಮುಖದಿಂ | ವೇದನುಡಿಸುತ ದ್ವಿಜರ ಯಮಪುರ |
ಹಾದಿ ಹಚ್ಚಿದ ಮುದದಿಪ್ಪತ್ತೇಳರಲಿ ಗುರುವು || 27 ||
ಹಾದಿ ಹಚ್ಚಿದ ಮುದದಿಪ್ಪತ್ತೇಳರಲಿ ಗುರುವು || 27 ||
ಮದಯುತ ಪಂಡಿತರುಗಳು ವಾದ ಮಾಡುವುದಾಗಿ ಹಠ ಹಿಡಿದಾಗ ಗುರುಗಳು ಅಲ್ಲಿ ಹಾದಿಯಲ್ಲಿ ಹೋಗುತ್ತಿದ್ದ ಅಂತ್ಯಜನನ್ನು ಕರೆಸಿ ಅವನಿಗೆ ವಿಭೂತಿ ಇಡಲು ಶಿಷ್ಯರಿಗೆ ಹೇಳುತ್ತಾರೆ. ನಂತರ ಏಳು ಗೆರೆಗಳನ್ನು ರಚಿಸಿ ಒಂದೊಂದನ್ನೂ ದಾಟಲು ಹೇಳಿ ಆತನ ಕುಲಗೋತ್ರಗಳು ಉತ್ತಮವಾಗುವ ಹಾಗೂ ಏಳನೆಯ ಗೆರೆ ದಾಟಿದ ಮೇಲೆ 'ತಾನು ಬ್ರಾಹ್ಮಣನು, ವೇದ ಪಂಡಿತನು, ವಾದ ಮಾಡಲು ಗುರುಗಳು ಕರೆಸಿದರು’ ಎನ್ನುತ್ತಾನೆ. ಗುರುಗಳು ಮದೋನ್ಮತ್ತ ದ್ವಿಜರಿಗೆ ವಾದ ಮಾಡಲು ಹೇಳುತ್ತಾರೆ. ಈ ಘಟನೆಗಳನ್ನೆಲ್ಲಾ ಕಂಡ ಅವರುಗಳು ಗುರುಗಳ ಅಪಾರ ಮಹಿಮೆ ಹಾಗೂ ತಾವು ಮಾಡಿದ ಮಹಾಪರಾಧದಿಂದ ಅಲ್ಲಿಂದ ಹೊರಟು, ನಂತರ ಕೊನೆಗೊಳ್ಳುತ್ತಾರೆ. ಗುರುಗಳ ಶಾಪದಿಂದ ಆ ಮದೋನ್ಮತ್ತರು ಹನ್ನೆರಡು ವರ್ಷ ರಾಕ್ಷಸರಾಗಿ ಕೊನೆಗೆ ಸದ್ಗತಿ ಹೊಂದುವ ಸುಂದರ ಕಥಾನಕ ಇಪ್ಪತ್ತೇಳನೆ ಅಧ್ಯಾಯದಲ್ಲಿದೆ.
ಮುಂದುವರಿಯುವುದು...
No comments:
Post a Comment