ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 35
ಅರುಹಿ ಕಚನಾಖ್ಯಾನವನು ಮೇಣರುಹಿ ಸೀಮಂತಿನಿಯ ವ್ರತವನು ।
ಗುರುವು ಮೂವತ್ತೈದರಲಿ ಸದ್ಧರ್ಮ ಹಚ್ಚಿದನು || 35 ||
ಮುಂದೆ, ಗುರುಚರಣದಲಿ ಸದ್ಭಕ್ತಿಯ ಆ ದಂಪತಿಗಳಿಗೆ ಗುರುವು ಕಚ ದೇವಯಾನಿಯ ಕಥೆಯನ್ನು ತಿಳಿಸಿ ಮಂತ್ರವು ಷಟ್ಕರ್ಣ (ಮೂರನೆಯವರಿಗೆ ತಿಳಿಸಿದರೆ) ಅದು ಹೇಗೆ ವ್ಯರ್ಥವಾಗುತ್ತದೆಂಬುದನ್ನು, ಸೀಮಂತಿನಿ ಎಂಬುವಳು ಸೋಮ ಪ್ರದೋಷ ವ್ರತವನ್ನು ಮಾಡಿ ಸೌಮಾಂಗಲ್ಯವನ್ನು ಸಾಧಿಸಿದ್ದು, ಸೀಮಂತಿನಿಯ ಗಂಡನು ನೀರಿನಲ್ಲಿ ಮುಳುಗಿ ಆತನ ರಾಜ್ಯವನ್ನು ಪರರು ಅಪಹರಿಸಿದ್ದು, ಮುಂದೆ ನಾಗರಾಜನ, ಶಿವನ ಕೃಪೆಯಿಂದ ಸೀಮಂತಿನಿಯ ಗಂಡನು ನಾಗಲೋಕದಿಂದ ಪುನಃ ಬಂದು ಸತಿ ಸೀಮಂತಿನಿಯನ್ನು ಕೂಡಿದ ವಿಚಾರಗಳನ್ನು ಶ್ರೀಗುರುವು ದಂಪತಿಯರಿಗೆ ತಿಳಿಸುವ ವಿಚಾರವೇ ಮೂವತ್ತೈದನೆಯ ಅಧ್ಯಾಯ. ಹೆಂಗಸರಿಗೆ ಮಂತ್ರೋಪದೇಶ ಸಲ್ಲದು. ಪತಿಭಕ್ತಿಯೇ ಸರ್ವಸ್ವ.
ಮುಂದುವರಿಯುವುದು...
No comments:
Post a Comment