ಒಟ್ಟು ನೋಟಗಳು

Friday, June 2, 2017

ಗುರುನಾಥ ಗಾನಾಮೃತ 

ಚಿಂತೆ ಮಾಡಬೇಡಾ ಮನುಜಾ
ರಚನೆ: ಅಂಬಾಸುತ 


ಚಿಂತೆ ಮಾಡಬೇಡಾ ಮನುಜಾ
ಚಿನುಮಯಾತ್ಮಕ ಗುರುವಿದ್ದಾನೆ||
ಚಿಂತೆ ಎಲ್ಲವ ಕಳೆಯುತ್ತಾನೇ
ಚಿತ್ತದೊಳಗೇ ತಾನಿರುತಾನೇ ||


ಹುಟ್ಟಿಸಿದವನು ಅವನಿದ್ದಾನೇ
ಅನ್ನ ವಸ್ತ್ರ ನೀಡುತ್ತಾನೇ
ಪಟ್ಟವಿರದಿದ್ದರೆ ಏನಂತೇ
ಕಡೇವರೆಗೂ ಕಾಯುತ್ತಾನೇ ||


ಕಷ್ಟವೆಂದೂ ಕೂಗೀ ಕರೆಯೇ
ಇಷ್ಟದಿಂದಾ ತಾ ಬರುತಾನೇ
ಕಷ್ಟ ಕಳೆದೂ ಅಭೀಷ್ಠ ನೀಡೀ
ಕಂಬನಿಯಾ ಒರೆಸುತ್ತಾನೇ ||


ಹೊನ್ನು ಮಣ್ಣು ಹೆಣ್ಣಿರದಿದ್ದರೂ
ಬದುಕಬಹುದೋ ಈ ಭುವಿಯೊಳಗೇ
ತಮವ ಕಳೆಯೋ ಗುರು ಸಿಗದಿದ್ದರೇ
ಸಾಗದಯ್ಯಾ ಬದುಕೂ ಮುಂದೇ ||


ಸೋಲು ಗೆಲುವು ಅಳುವು ನಗುವೂ
ಅವನ ಪಾದದಡಿಯಲ್ಲಿರಿಸೀ
ನೀನೇ ಗತಿಯೂ ನೀನೇ ಮತಿಯೂ
ಎಂದು ಅವನ ಬೇಡಿದ ಮೇಲೇ ||

No comments:

Post a Comment