ಗುರುನಾಥ ಗಾನಾಮೃತ
ಜೋ ಜೋ ಜೋ ಜೋ ಸದ್ಗುರುವರ್ಯಾ
ರಚನೆ: ಅಂಬಾಸುತ
ಜೋ ಜೋ ಜೋ ಜೋ ಸದ್ಗುರುವರ್ಯಾ
ಭಕ್ತೋದ್ಧಾರಕ ನೀನೇ ನಿಜ ಸೂರ್ಯಾ ||
ಆದ್ಯಂತ ರಹಿತಾ ಆನಂದಭರಿತಾ
ಅಖಿಲಾ ಭುವನಾ ಪಾಲಕ ಅಪ್ರಮೇಯಾ ||
ಸುಮನಸ ವಂದಿತ ಭಕ್ತ ಸೌಖ್ಯಾಧಾತಾ
ಸಂಖ್ಯೆಗೆ ಸಿಲುಕದ ಮಹಿಮಾ ಸ್ವಯಂಪ್ರಕಾಶಾ ||
ನಿತ್ಯ ನಿರಂಜನಾ ಆನಂದ ನಿಲಯಾ
ಭವಸಾಗರವ ದಾಟಿಪ ನಿಜ ನಾವೀಕಾ ||
ಸಖರಾಯಪುರವಾಸಾ ಸದ್ಗುರುನಾಥಾ
ಪವಡಿಸಯ್ಯಾ ಅಂಬಾಸುತನ ಅವಧೂತಾ ||
No comments:
Post a Comment