ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 24
ಮುನಿ ತ್ರಿವಿಕ್ರಮ ನಿಂದಿಪುದನಾ । ಮನದಿ ತಿಳಿದಾ ವಿಶ್ವರೂಪವ ।
ವಿನಯದಲಿ ತೋರಿಸಿದನಿಪ್ಪತ್ತನಾಲ್ಕರಲ್ಲಿ ಗುರುವು ।। 24 ।।
ಗುರುವು ಒಂದು ವ್ಯಕ್ತಿ ಮಾತ್ರವಲ್ಲ. ಗುರುತತ್ವ ಪ್ರಕಟಕ್ಕೆ ಒಂದು ಶರೀರ ಅನಿವಾರ್ಯವಿರಬಹುದು. ಆ ಗುರುಶಕ್ತಿ, ಅದನ್ನರಿಯುವುದೇ ಗುರುಭಕ್ತಿಯ ಮೂಲವೆಂಬುದನ್ನು ತಿಳಿಸುವ ಕಥೆಯೊಂದು ಇಪ್ಪತ್ತನಾಲ್ಕರಲ್ಲಿ ಇದೆ. ಮಾಯೆ ಎಂಬುದು ಎಂತಹ ಯತಿಗಳನ್ನೂ ಬಿಡದು. ಆದರೆ ಸಾಧಕರ ಆಳವನ್ನರಿತ ಶ್ರೀ ಗುರುಗಳು ಎಂತಹವರಿಗೂ ತನ್ನ ಕರುಣೆ ತೋರಿ ಉದ್ಧಾರ ಮಾಡುತ್ತಾರೆ. ಗಾಣಗಾಪುರದ ಸಮೀಪದಲ್ಲಿರುವ ಕುಮಸಿ ಎಂಬ ಗ್ರಾಮದಲ್ಲಿ ತ್ರಿವಿಕ್ರಮ ಭಾರತಿ ಎಂಬ ಯತಿಗಳಿದ್ದು, ನಿರಂತರ ಸಾಧನೆಯಲ್ಲಿ ಇರುತ್ತಾರೆ. ಸುತ್ತಮುತ್ತಲ ಜನ ಶ್ರೀಗುರುಗಳ ಅಗಾಧ ಮಹಿಮೆಯನ್ನು ಅವರಿಗೆ ಅರುಹಿದಾಗ ಅವರು 'ಛೇ, ಅವನೊಬ್ಬ ಡಾಂಭಿಕ. ನಿಮಗೆಲ್ಲಾ ಮೋಸವಾಗಿದೆ' ಎಂದು ಹೇಳುತ್ತಿರುತ್ತಾರೆ. ತ್ರಿವಿಕ್ರಮ ಭಾರತಿ ಯತಿಯ ಬಗ್ಗೆ ಕರುಣೆಯುಂಟಾಗಿ ಶ್ರೀಗುರುಗಳೇ ಕುಮಸಿಗೆ ಶಿಷ್ಯನನ್ನು ಉದ್ಧರಿಸಲು ಬರುತ್ತಾರೆ. ತನ್ನ ಇಷ್ಟ ದೈವದ ಪೂಜೆಯಲ್ಲಿದ್ದ ಯತಿಗೆ ಗುರುಗಳೇ ಕಾಣಿಸುತ್ತಾರೆ. ಅಲ್ಲಿ ಬರುತ್ತಿರುವ ಎಲ್ಲರಲ್ಲೂ ಗುರುಸ್ವರೂಪವೇ ಕಂಡುಬಂದಾಗ ತ್ರಿವಿಕ್ರಮ ಯತಿಗೆ ತನ್ನ ತಪ್ಪಿನ ಅರಿವಾಗಿ, ಶ್ರೀಗುರುಗಳ ಚರಣಕ್ಕೆ ಎರಗಿ ಅವರ ಅನನ್ಯ ಭಕ್ತರಾಗುತ್ತಾರೆ.
ಮುಂದುವರಿಯುವುದು...
No comments:
Post a Comment