ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 32
ಪತಿಯೊಡನೆ ಸಹಗಮನಕ್ಕಾಗಿಯೇ । ಸತಿಯು ತೆರಳಲು ಗುರುವ ನೋಡಲು ।
ಪತಿಯ ಮೂವತ್ತೆರಡರಲಿ ಎಬ್ಬಿಸಿದನಾ ಗುರುವು || 32 ||
ಪತ್ನಿಯ ಧರ್ಮ, ಆಚರಣೆಗಳನ್ನೆಲ್ಲಾ ಕೇಳಿದ ದತ್ತನ ಹೆಂಡತಿಯು ತಾನೂ ಸಹಗಮನ ಮಾಡುವುದಾಗಿ ನಿರ್ಧರಿಸಿ, ಸುಮಂಗಲಿಯರನ್ನು ಕರೆದು ಬಾಗಿನಗಳನ್ನು ನೀಡಿ, ತನ್ನ ಊರಿನಲ್ಲಿರುವ ಅತ್ತೆ ಮಾವಂದಿರಿಗೆ 'ನಾವಿಲ್ಲಿ ಸುಖವಾಗಿದ್ದೇವೆಂದು ತಿಳಿಸಿ. ಗುರು ಕರುಣೆಯಿಂದ ನನ್ನ ಗಂಡ ರೋಗ ಮುಕ್ತನಾಗಿರುವನೆಂದು ತಿಳಿಸಿ. ಅವರಿಗೆ ಸತ್ಯದ ಅರಿವಾಗಬಾರದು. ಪುತ್ರ ವಿಯೋಗದ ದುಃಖವನ್ನು ಈ ವೃದ್ಧಾಪ್ಯದಲ್ಲಿ ಅವರು ಸಹಿಸಲಾರರು' ಎಂದು ಬಿನ್ನವಿಸುತ್ತಾಳೆ. ಇತ್ತ ಶಿಷ್ಯರುಗಳು ರುದ್ರಾಭಿಷೇಕದಿಂದ ಗುರುವನ್ನು ಪೂಜಿಸಿ, ತೀರ್ಥ ತಂದು ಶವಕ್ಕೆ ಪ್ರೋಕ್ಷಿಸುತ್ತಾರೆ. ಗುರು ಕರುಣೆಯು ದಂಪತಿಗಳಿಗೆ ಆಗುತ್ತದೆ. ಶವದಲ್ಲಿ ಜೀವ ಸಂಚಾರವಾಗಿ ದತ್ತನು ಬದುಕೇಳುತ್ತಾನೆ. ಊರ ಜನರೆಲ್ಲಾ ಗುರು ಮಹಿಮೆ ಕಂಡು ಆಶ್ಚರ್ಯ ಪಡುತ್ತಾರೆ. ಭಕ್ತರ ರಕ್ಷಣೆಗಾಗಿಯೇ ಗುರುವು ನರರೂಪದಲ್ಲಿ ಗಾಣಗಾಪುರದಲ್ಲಿ ಅವತರಿಸಿದ್ದಾನೆಂದು ಎಲ್ಲರೂ ಸಂತಸಪಡುವ ವಿಚಾರ ಮೂವತ್ತೆರಡನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment