ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 31
ತರುಣಿಗಾನಂತರ ಪತಿವ್ರತೆಯರ ಸುತತ್ವದ ಬೋಧಿಸಿದನಾ ।
ಗುರುವು ಮೂವತ್ತೊಂದರಲಿ ಸಹಗಮನದ ವಿಧಿಗಳನು || 31 ||
ತನ್ನ ಗಂಡನ ಮರಣದ ದುಃಖದಲ್ಲಿರುವ ಸತಿಗೆ ಗುರುಗಳು ಸಾಂತ್ವನ ಹೇಳಿ, ಈ ಜಗತ್ತಿನಲ್ಲಿ ಪತಿವ್ರತಾ ಧರ್ಮ ಎಷ್ಟು ಮಹತ್ತರವಾದುದು ಎಂಬುದನ್ನು ತಿಳಿಸುತ್ತಾರೆ. ಪತಿಯನ್ನು ಪರದೈವವೆಂದು ಭಾವಿಸುವ ನಾರಿಯ ಘನತೆಯನ್ನು ಅರುಹುತ್ತಾ ಸಹಗಮನದ ವಿಶೇಷಗಳನ್ನು ತಿಳಿಸುತ್ತಾ - ಸಹಗಮನದ ವಿಧಿ-ವಿಧಾನಗಳನ್ನು ವಿವರಿಸಿ ಭಾಗೀರಥಿ ಸ್ನಾನಕ್ಕಿಂತ ಪತಿವ್ರತೆಯರ ದರ್ಶನ ಅಪಾರ ಪುಣ್ಯದಾಯಕ, ಏಳೇಳು ಜನ್ಮಗಳ ಪಾಪವನ್ನು ನಾಶ ಮಾಡುವಂತಹುದು ಎಂದು ಹೇಳುವ ವಿಚಾರವೇ ಮೂವತ್ತೊಂದನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment