ಒಟ್ಟು ನೋಟಗಳು

Wednesday, June 7, 2017

ಗುರುನಾಥ ಗಾನಾಮೃತ 

ಯಜ್ಞದಾ ಪಶುವಾದೇ
ರಚನೆ: ಅಂಬಾಸುತ 


ಯಜ್ಞದಾ ಪಶುವಾದೇ
ಸುಳ್ಳು ನಂಬಿಕೆಗೆ ವಶವಾದೇ
ಸೋಜಿಗದ ವಧೆಗೇ
ತಲೆ ತಗ್ಗಿಸೀ ನಿಂತೇ ||

ಹೇಳಲಿಲ್ಲ ಕೇಳಲಿಲ್ಲಾ
ಹಿಡಿದೆಳೆದು ತಂದರೂ
ದೈವದಾ ಹೆಸರಿನಲೀ
ದೈತ್ಯತನ ಮೆರೆದರೂ ||

ಪಾಪದಾ ಪ್ರಜ್ಞೆಗೋ
ಪೂಜೆಯನು ಮಾಡಿದರೂ
ಬಣ್ಣ ಬಣ್ಣದ ಹೂ
ಮಾಲೆಯಾ ಹಾಕಿದರೂ ||

ಮೂಕತನವಿಲ್ಲೀ
ನಿಜಮೂಕವೇ ಆಗಿಹುದೂ
ಮರಣದಾ ಸಂಭ್ರಮ(?) ಕೆ
ಕಾದು ನಿಂತಿಹುದೂ ||

ಕಟುಕನಾ ಕರದಲ್ಲೀ
ಇಹುದೆನಗೆ ಮೋಕ್ಷಾ
ಅರಿತವರು ಯಾರಿಲ್ಲೀ
ಎನಗವನೇ ಸರಸಿಜಾಕ್ಷಾ ||

ಒದ್ದಾಡುವೆನು ನಾ
ನೆತ್ತರಾ ಬಸಿದೂ
ಕಾದಿಹರು ಮನುಜರೂ
ಕಾಲಕಾಲದಿ ಹಸಿದೂ ||

No comments:

Post a Comment