ಒಟ್ಟು ನೋಟಗಳು

Wednesday, June 7, 2017

ಗುರುನಾಥ ಗಾನಾಮೃತ 

ಕಂಡೇ ಕಂಡೇ ನಾ ಶ್ರೀಚಾಮುಂಡಿಯಾ
ರಚನೆ: ಅಂಬಾಸುತ 


ಕಂಡೇ ಕಂಡೇ ನಾ ಶ್ರೀಚಾಮುಂಡಿಯಾ
ರಜತಾದ್ರಿವಾಸಿನೀ ಜಗದಂಬೆಯಾ ||

ಅಷ್ಟಾದಶಭುಜೆ ಅಂಬಿಕೆಯಾ
ಆಗಮನಿಗಮಾ ವಂದಿತೆಯಾ

ಮಹಿಷಾಸುರ ಮರ್ಧಿನಿಯಾ
ಮಹಾಬಲೇಶ್ವರ ಪ್ರಿಯಸತಿಯಾ ||

ಸ್ವರ್ಣಕಿರೀಟ ಭೂಷಿತೆಯಾ
ನೀಲಪಿತಾಂಬರ ವಿರಾಜಿತೆಯಾ
ಸಿಂಹವಾಹಿನಿ ಶ್ರೀ ದೇವಿಯಾ
ಶ್ರೀಧರಸೋದರಿ ಶ್ರೀಮಾತೆಯಾ ||

ಸಾವಿರ ಮೆಟ್ಟಿಲ ಹತ್ತುತಲೀ
ಸಾವಿರನಾಮಾ ಪೇಳುತಲೀ
ಸಾಕ್ಷಾತ್ಕಾರವ ನೀಡೆನುತಲೀ
ಸಾತ್ವಿಕಭಾವದಿ ಕೇಳಿದ ಕ್ಷಣದಲೀ ||

No comments:

Post a Comment