ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 26
ವೇದ ಪಠಣದ ಮದದ ದ್ವಿಜರಿಗೆ | ವೇದರಚನೆಯ ಹೇಳಿ ಬುದ್ಧಿಯ |
ವಾದವನು ಪೇಳಿದನು ಇಪ್ಪತ್ತಾರರಲಿ ಗುರುವು || 26 ||
‘ವೇದವನ್ನು ಬಲ್ಲಿರೆಂಬುವಿರಲ್ಲ, ನಾಲ್ಕು ವೇದವನ್ನು ತಿಳಿದಿದ್ದೇವೆಂಬುವಿರಲ್ಲ, ವೇದದ ಅಪಾರತೆ ಎಷ್ಟಿದೆ ಬಲ್ಲಿರಾ? ಬ್ರಹ್ಮನಿಂದ ಒಂದು ಮುಷ್ಟಿಯಷ್ಟು ವೇದವನ್ನು ಕೇಳಿ ಪಡೆದ ಭಾರದ್ವಾಜ ಋಷಿಯು ಜೀವಮಾನವಿಡೀ ಅಧ್ಯಯನ ಮಾಡಿದರೂ ಅದು ಪೂರ್ಣವಾಗಲಿಲ್ಲ. ಹೀಗೆ ಅಪಾರವಿರುವ ವೇದದ ವಿಚಾರದಲ್ಲಿ ವಾದ ಬೇಡ. ಅದೂ ಅಲ್ಲದೆ ನಾವು ಸನ್ಯಾಸಿಗಳು ನೀಡುವ ಜಯಪತ್ರದಿಂದ ನಿಮಗಾವ ಲಾಭವೂ ಇಲ್ಲ. ನೆಮ್ಮದಿಯಾಗಿ ಬಾಳಿರಿ’ ಎಂದು ಬುದ್ಧಿವಾದ ಹೇಳಿದರೂ ’ಕೇಡುಗಾಲ ಸಮೀಪಿಸಿದಾಗ ಹಿತನುಡಿಗಳು ರುಚಿಸದೆಂಬಂತೆ’ ಪಂಡಿತರು ವಾದ ಬೇಕೆಂದು ಹಠ ಹಿಡಿದದ್ದೇ ಇಪ್ಪತ್ತಾರನೇ ಅಧ್ಯಾಯದ ಸಾರವಾಗಿದೆ.
ಮುಂದುವರಿಯುವುದು...
No comments:
Post a Comment