ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 28
ಪತಿತ ಧರ್ಮಾಧರ್ಮ ವರುಹುತ । ಸತಿಸುತರ ನೋಡನವನ ಕಳುಹಿದ ।
ನತಿ ವಿನೋದದೊಳಿಪ್ಪತ್ತೆಂಟನೆಯಲ್ಲಿ ಶ್ರೀಗುರುವು || 28 ||
ಗುರುಗಳ ಬಳಿ ಇದ್ದ ಚಾಂಡಾಲನು ತಾನೀಗ ಬ್ರಾಹ್ಮಣನಾಗಿದ್ದೇನೆ, ತನ್ನ ಪರಿವಾರದೊಂದಿಗೆ ನಾನು ಹೋಗಲಾರೆನೆಂದು ಹಠ ಹಿಡಿದಾಗ ಗುರುಗಳು ಆತನಿಗೆ ಸ್ನಾನ ಮಾಡಲು ಹೇಳುತ್ತಾರೆ. ವಿಭೂತಿ ತೊಡೆದು ಹೋದ ಕೂಡಲೇ ಆತ ತನ್ನ ಪರಿವಾರದೊಂದಿಗೆ ಹೋಗಲು ಸಿದ್ಧನಾಗುತ್ತಾನೆ. 'ತನಗೆ ಈ ಚಂಡಾಲ ಜನ್ಮ ಬಂದಿದ್ದು ಹೇಗೆ, ಗುರುಗಳೇ ತಿಳಿಸಿ' ಎಂದು ವಿನಂತಿಸಿದಾಗ 'ಹಿಂದಿನ ಜನ್ಮದಲ್ಲಿ ನೀನು ತಂದೆ ತಾಯಿಗಳನ್ನು ಧಿಕ್ಕರಿಸಿದೆ. ಆ ಪಾಪದ ಫಲವಿದೆಂದು ತಿಳಿಸುತ್ತಾರೆ. ನೆರೆದ ಜನ ಗುರುಗಳ ಈ ಅಸಾಮಾನ್ಯ ಶಕ್ತಿಗೆ ಬೆರಗಾಗಿ ಅಚ್ಚರಿ ಪಡುವ ವಿಷಯವು ಇಪ್ಪತೆಂಟನೆಯ ಅಧ್ಯಾಯದಲ್ಲಿ ಬರುತ್ತದೆ.
ಮುಂದುವರಿಯುವುದು...
No comments:
Post a Comment