ಒಟ್ಟು ನೋಟಗಳು

Tuesday, June 20, 2017

ಗುರುನಾಥ ಗಾನಾಮೃತ 
ಸಖರಾಯಪುರವಾಸ ಗುರುನಾಥಾ ಗುರುನಾಥಾ
ರಚನೆ: ಅಂಬಾಸುತ 


ಸಖರಾಯಪುರವಾಸ ಗುರುನಾಥಾ ಗುರುನಾಥಾ
ಸದ್ಭಕ್ತ ಪರಿಪಾಲಕ ಗುರುನಾಥಾ ಗುರುನಾಥಾ ||ಪ||

ಶ್ರೀ ಶ್ರೀನಿವಾಸಾ ಶಾರದೆಯ ತನಯಾ
ಶ್ರೀವೇಂಕಟಾಚಲ ನಾಮದಾ ಅವಧೂತಾ ||೧||

ಬದುಕುವುದಾ ಕಲಿಸಿದಾ ಬವಣೆಗಳಾ ಅಳಿಸಿದಾ
ಘನಮಹಿಮಾ ತಾನಾಗಿ ಆನಂದ ನೀಡಿದಾ ||೨||

ಸಂಸಾರ ಸಾಗರವ ದಾಟಿಸುವ ನಾವೀಕಾ
ವೈರಾಗ್ಯ ಭಾವನೀಡಿ ಉತ್ತುಂಗಕೊಯ್ಯೋ ಈಶಾ ||೩||

ಸುಂದರ ವದನಾ ಅನ್ನಪೂರ್ಣೆಯಾ ಸದನಾ
ಬೇಡದಾ ಭಕ್ತರಾ ಕಡೆ ಇವರಾ ಗಮನಾ ||೪||

ಶಂಕರ ರೂಪಾ ಶಂಕೆಯ ಹರಿಸುವ ಪ್ರದೀಪಾ
ಕೊಂಕಾಡುವ ಭಕ್ತರಾ ಕಂಡರೆ ಕಿಡಿ ರೂಪಾ ||೫||

ಮರುಗಿ ಬಂದವರಾ ಮನದೊಳು ತಾ ನಿಲುವಾ
ಮಾತಲ್ಲೇ ಮಹಾಸಂಕಟ ಕಳೆದೂ ತಾ ಬಿಡುವಾ ||೬||

ಧರ್ಮದ ಹಾದಿಯ ತೋರುವ ಧನಿಕತೆಯಾ ಮರೆವಾ
ದಾನಾದಿಗಳ ಮಾಡಿಸಿ ದತ್ತನ ಕೃಪೆ ಕೊಡಿಸುವಾ ||೭||

ಅಂಬಾಸುತನಾ ಅಂತರಂಗವ ತಿಳಿಗೊಳಿಸುವಾ
ಆದ್ಯಂತರಹಿತನಾಗಿ ಜಗದೊಳು ತಾ ಮೆರೆದಿಹಾ ||೮||

ಗುರುನಾಥಾ ಗುರುನಾಥಾ ಗುರುನಾಥಾ ಗುರುನಾಥಾ
ಗುರುನಾಥಾ ಗುರುನಾಥಾ ಗುರುನಾಥಾ ಗುರುನಾಥಾ ||೯||

No comments:

Post a Comment