ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 66
'ಯತಿ ಭಿಕ್ಷೆ ನೀಡು ತಾಯಿ - ಇದೇ ಕೊನೆಯದು... '
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರಿಗೂ ತಮ್ಮ ಶಿಷ್ಯರಿಂದ ಅಗಲಿಕೆಯ ನೋವು ಇತ್ತೇನೋ ಎನಿಸದಿರದು. ಏಕೆಂದರೆ ಮಾನವ ಶರೀರಧಾರಿಯಾದ ಗುರುನಾಥರು ಎಲ್ಲರಂತೆ ತಾವೂ ಎಂದು ಅನೇಕ ಸಾರಿ ತೋರಿದ್ದಿದೆ. ಚಿಕ್ಕಮಗಳೂರಿನ ಒಬ್ಬ ಗುರುಭಕ್ತರ ಮನೆಗೆ ಪದೇ ಪದೇ ಅನೇಕ ವರ್ಷಗಳಿಂದ ಬರುತ್ತಿದ್ದ ಅವರು ತಮ್ಮ ಮುಂದಿನ ನಿರ್ಧಾರವನ್ನು ತಿಳಿಸುವಾಗ ಅವರಿಗೂ, ಭಕ್ತರಿಗೆ ನೋವಾಗುವುದೆಂದೋ ಏನೋ, 'ಇನ್ನು ನಾನು ನಿಮ್ಮ ಮನೆಗೆ ಬರುವುದಿಲ್ಲ. ಇದೆ ಕಡೆಯ ತುತ್ತು. ನಾನಿಷ್ಟೇ ನಿಮಗೆ ಮಾಡಲಾಗಿದ್ದು' ಎಂದ ಮಾತನ್ನು ಅವರ ಭಕ್ತೆಯೊಬ್ಬರು ಅಳು ಅಳುತ್ತಾ ಸ್ಮರಿಸುತ್ತಾರೆ.
ಮನೆಯಲ್ಲಿ ತಟ್ಟೆಯ ಮೇಲೋ, ಎಲೆಯ ಮೇಲೋ ಊಟ ಹಾಕುತ್ತೇನೆ ಎಂದು ಅವರೆಂದಾಗ, 'ಬೇಡ, ನನಗೆ ಚಿಪ್ಪಿನಲ್ಲಿಯೇ ಊಟ ಹಾಕು. ಚಿಪ್ಪಿನಲ್ಲಿ ಊಟ ಹಾಕಿದರೆ ಯತಿಭಿಕ್ಷೆಯಾಗುತ್ತೆ. ತಟ್ಟೆಯಲ್ಲಿ ಬಡಿಸಿದರೆ ಅದು ಆತಿಥ್ಯವಾಗುತ್ತದೆ. ಯತಿಭಿಕ್ಷೆ ಸುಲಭ ಲಭ್ಯವಲ್ಲ' ಎಂದು ಭಕ್ತರಿಗೆ, ಕೋಟಿ ಕೋಟಿ ಪುಣ್ಯಗಳ ಹೊರೆ ನೀಡಿ ಉದ್ಧರಿಸಲು ಆಡಿದ ಗುರುನಾಥರ ಮಾತನ್ನು ನೆನೆದಾಗಲೆಲ್ಲಾ ಅವರು ಕೊರಗುತ್ತಾರೆ.
"ನಮಗಾಗ ಗುರುನಾಥರ ಮಾತಿನ ಅರ್ಥವೇ ಆಗಿರಲಿಲ್ಲ. ದೈಹಿಕ ನೋವು, ಖಾಯಿಲೆಗಳಿರುವುದರಿಂದ ಇವರು ಹೀಗೆನ್ನುತ್ತಾರೇನೋ ಅಂದುಕೊಂಡಿದ್ದೆವು. ಆದರೆ, ಅಂದು ನಮ್ಮ ಮನೆಯಿಂದ ಹೊರಟವರು ಹೀಗೆ ದೇಹತ್ಯಾಗ ಮಾಡಿದರೆಂಬ ವಿಚಾರ ನಂಬಲೇ ಆಗಿಲ್ಲ. ಬೆಳಗೆದ್ದರೆ ಗುರುನಾಥರ ಫೋನು ಬರುತ್ತಿತ್ತು. ಸುಖ ದುಃಖ ವಿಚಾರಿಸಿಕೊಳ್ಳುವ ಬಂಧು, ಗುರು, ಸ್ನೇಹವಂತರವರಾಗಿದ್ದರು. ನಮ್ಮ ಮನೆಯ ತುಂಬೆಲ್ಲಾ ಅವರೇ ಇದ್ದಾರೆ, ಓಡಾಡುತ್ತಿದ್ದಾರೆ ಅಂತಲೇ ಅನಿಸುತ್ತದೆ. ಅವರು ನಮ್ಮ ದೇಹದ ಒಂದು ಭಾಗವೆಂದು ಭಾವಿಸಿದ್ದೆವು. ಅದೇಕೋ ಅಂದು ಅವರು ಬಂದವರೇ ನಮ್ಮನ್ನು ಗಡಿಬಿಡಿ ಮಾಡಿ ಏಳಿಸಿದರು. ಜೊತೆಗೆ ಶಿವಮೊಗ್ಗದ ಭಕ್ತರನ್ನೂ ಕರೆದುಕೊಂಡು ಬಂದಿದ್ದರು. ಎಲ್ಲ ಅಡಿಗೆಯನ್ನೂ ಮಾಡಿಸಿ, ಬಾಳೆಯ ಎಲೆಯ ಮೇಲೆ ಎಲೆ ಬರುವಂತೆ (ವೈದಿಕ -ಶ್ರಾದ್ಧಗಳಲ್ಲಿಯಂತೆ) ಹಾಕಿಸಿ, ವಿಷ್ಣುಪಾದವನ್ನು ತಂದಿಟ್ಟು, ಶ್ರಾದ್ಧ ದಿನದಂದು ಮಾಡುವಂತೆ ಅದೇನೇನೋ ಮಾಡಿ ನಂತರ ಬಡಿಸಲು ಹೇಳಿದರು. ನನ್ನ ಮಗಳು ಬಡಿಸುತ್ತೇನೆ ಎಂದು ಬಂದಾಗ 'ಏನು ಅಡಿಗೆ ಮಾಡಿಯೇ ಸೋತು ಹೋಗಿಬಿಟ್ಟೆಯಾ? ಒಂದು ಕೊಟ್ರೆ ನೋಡು ಹೆಂಗಿರಬೇಕು' ಎಂದು ನನ್ನ ಕೈಯಲ್ಲೇ ಬಡಿಸಿಸಿದರು. ಇದೆಲ್ಲಾ ನಮಗೇನೂ ಆಗ ತಿಳಿಯಲಿಲ್ಲ. ಗುರುನಾಥರು ಯಾರಿಗಾಗಿ ಈ ಕ್ರಿಯೆಯನ್ನೆಲ್ಲಾ ಮಾಡಿಸಿದರು? ನಮ್ಮ ಮನೆಯಲ್ಲಿ, ನಮ್ಮ ಕೈಯಲ್ಲಿ ಈ ಸೇವೆ ತೆಗೆದುಕೊಂಡಿದ್ದು ನಮ್ಮ ಪುಣ್ಯವೋ, ಮತ್ತೇನೋ ನನಗಂತೂ ತೋಚದು. ಅವರು ಹೇಳಿದ್ದಷ್ಟನ್ನೇ ಮಾಡುವ ಸೇವಕರು ನಾವಾಗಿದ್ದೀವಿ" ಎನ್ನುತ್ತಾರೆ ಆ ದಿನವನ್ನು ನೆನೆದು.
"ಆ ದಿನ ಅದೇಕೋ ಅವರ ಮನಸ್ಸು ಎಂದಿನಂತೆ ಇರಲಿಲ್ಲವೆಂದು ಅನಿಸುತ್ತಿತ್ತು. 'ಇದೇ ಕೊನೆಯ ತುತ್ತು' ಎಂದು ನಮಗೆಲ್ಲಾ ತುತ್ತನ್ನು ಬಾಯಿಗಿಟ್ಟರು. ಗೂಡು ಬಿಟ್ಟು, ಬಲಿತ ಮರಿಗಳನ್ನು - ತೊರೆದು ಹಾರಿ ಹೋಗುವ ತಂದೆ-ತಾಯಿ ಹಕ್ಕಿಯ ಮನಸ್ಸಿನಂತೆ ಅವರ ಮನಸ್ಸಾಗಿತ್ತು. ನಮ್ಮ ಮನೆಯಿಂದ ಹೊರಟ ಅವರು ಎರಡು ಮೂರು ಬಾರಿ ಕಾರನ್ನು ನಮ್ಮ ಮನೆಯ ಮುಂದೆ ಓಡಿಸಲು ಹೇಳಿದರು. ಆ ಮಾತೃ ಹೃದಯದಲ್ಲಿ ನಮ್ಮನ್ನೆಲ್ಲಾ ಪರದೇಶಿಗಳನ್ನಾಗಿ ಮಾಡಿ, ತಾವು ಹೋಗಲೇಬೇಕಾದ ಅನಿವಾರ್ಯತೆ ಬಂದಿರುವುದನ್ನು ಬಾಯಿಬಿಟ್ಟು ಹೇಳಲಾರದೇ, ಗುರುನಾಥರು ಚಡಪಡಿಸುತ್ತಿದ್ದರೇನೋ ಎಂದು ಈಗ ಅನಿಸುತ್ತದೆ. ಕೊನೆಯ ಬಾರಿಯಂತೂ ನಮ್ಮ ಮನೆಯನ್ನು ಬಿಟ್ಟು, ನಮ್ಮನ್ನೆಲ್ಲಾ ಬಿಟ್ಟು ಹೊರಡುವಾಗ ಅವರ ಕಣ್ಣಿನಲ್ಲಿ ಆತ್ಮೀಯತೆ, ಕರುಣೆ, ವಾತ್ಸಲ್ಯಗಳ ಹೊಳೆ ಹರಿಯುತ್ತಿದೆ ಎಂದೇ ಅನಿಸುತ್ತಿತ್ತು. ಪುರುಷ ಶ್ರೇಷ್ಠರಾದುದರಿಂದ ಗುರುನಾಥರ ಕಣ್ಣಿನಲ್ಲಿ ಅಡಗಿದ ವಾತ್ಸಲ್ಯ ಕಂಬನಿಯಾಗಿ ಹೊರ ಧುಮ್ಮಿಕ್ಕಲಿಲ್ಲವೇನೋ. ಆದರೆ ಹೃದಯದಲ್ಲಿ ಅದೆಷ್ಟು ನೋವು ಅನುಭವಿಸಿದರೋ. ಏಕೆಂದರೆ, ಭಕ್ತಾಪರಾಧೀನ, ಕರುಣೆಯ ಕಡಲು, ವಾತ್ಸಲ್ಯಮಯಿ, ಮಾತೃಪ್ರೇಮಿಯಾಗಿದ್ದರು - ಗುರುನಾಥರು. ನಮಗೆ ಅದೆಂತಹ ಮೌಢ್ಯ ಬಂದು ಆವರಿಸಿತ್ತೋ, ಅವತ್ತೇನೂ ಅರ್ಥವಾಗಲೇ ಇಲ್ಲ. ಇವತ್ತು ಅವರ ಒಂದೊಂದು ಮಾತುಗಳ, ಕ್ರಿಯೆಗಳ, ನಡೆಯ ಅರ್ಥ ಸ್ಪಷ್ಟವಾಗುತ್ತಿದೆ.... ".
ಮತ್ತೆ ಕಣ್ಣು ಒದ್ದೆಯಾಯಿತು. ಅವರ ಗಂಟಲು ಕಟ್ಟಿತು. ಮುಂದೆ ಮಾತನಾಡಲಾಗದೇ ಗುರುನಾಥರ ಅಗಲಿಕೆಯ ನೋವನ್ನು ಆ ತಾಯಿಯ ಹೃದಯದಲ್ಲೇ ಅನುಭವಿಸುತ್ತಿದ್ದರು.
ಎಲ್ಲವನ್ನೂ ಗುರುನಾಥರಿಗೆ ಅವರು ಇದ್ದಾಗಲೂ, ಈಗಲೂ ಅರ್ಪಿಸಿ ನಿಶ್ಚಿಂತೆಯಿಂದ ಗುರುನಾಥರ ನಾಮಸ್ಮರಣೆ, ಅವರ ನುಡಿಯಂತೆ ನಡೆಯುತ್ತಿರುವ ಆ ತಾಯಿಗೆ ಗುರುನಾಥರವರ ಬಳಿ ಇದ್ದಾರೆಂಬುದೇ ನಂಬಿಕೆ. ಮಗಳ ಮದುವೆ ನಿಶ್ಚಿತವೂ ಗುರುನಾಥರೇ ಮಾಡಿಸಿದರು. ಮುಂದಿನ ತಮ್ಮ ಎಲ್ಲಾ ಆಗು ಹೋಗುಗಳೂ ಅವರ ನಿರ್ಣಯದಂತೆಯೇ, ಎಂದು ನಂಬಿ ಬಾಳುತ್ತಿರುವ ಆ ತಾಯಿ, ಬೇಸರವೆನಿಸಿದರೆ ಗುರುನಾಥರೇ ನಿರ್ಮಿಸಿರುವ (ಅವರ ಮನೆಯಲ್ಲಿಯೇ - ಸ್ವಹಸ್ತದಿಂದ) ವೇದಿಕೆಯ ಬಳಿ ಎರಡು ಕ್ಷಣ ಕುಳಿತರೆ, ಎಲ್ಲ ನಿಶ್ಚಿಂತೆ. ಗುರುನಾಥರು ತಿಳಿಸಿದಂತೆ ವೇದಿಕೆಯ ಪೂಜೆ, ವೇದಿಕೆ ನೋಡಲು ಯಾರು ಬಂದರೂ ಮನೆಯ ಬಾಗಿಲು ತೆರೆದಿರುವುದು, ಬಂದ ಅತಿಥಿ ಅಭ್ಯಾಗತರ ಸೇವೆ ಮಾಡಿ, ನಾಲ್ಕು ಮಾತು ಗುರುನಾಮ ಸಂಕೀರ್ತನೆ ಮಾಡುವುದು ಅವರ ನಿತ್ಯ ಕರ್ಮವಾಗಿದೆ.
ಪ್ರಿಯ ಗುರುಬಾಂಧವರೇ.... ಅವಿನಾಶಿ ಗುರುನಾಥರ ಪದತಲ ದೊರಕಿದ ಮೇಲೆ ಇಲ್ಲದ ಚಿಂತೆ ಏಕೆ? ಭಾವ ದೃಢವಿರಲು ಗುರುಸನಿಹದಲ್ಲೇ ಇದ್ದು ಎಲ್ಲಾ ನಡೆಸುತ್ತಾರೆ ಎಂಬುದಕ್ಕೆ ಈ ತಾಯಿಯೇ ಸಾಕ್ಷಿ.
ಇಂದಿನ ಸತ್ಸಂಗಕ್ಕೆ ಅಲ್ಪವಿರಾಮ ಹಾಕೋಣವೇ? ನಾಳೆ ಮತ್ತೆ ಬರುವಿರಲ್ಲಾ - ನಿತ್ಯ ಸತ್ಸಂಗಕ್ಕಾಗಿ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment