ಒಟ್ಟು ನೋಟಗಳು

Friday, May 19, 2017

ಗುರುನಾಥ ಗಾನಾಮೃತ 

ಪಾದಪದುಮ ಕಂಡೆನೂ 
ರಚನೆ: ಅಂಬಾಸುತ 


ಪಾದಪದುಮ ಕಂಡೆನೂ ನಮ್ಮ
ಗುರುವರನಾ ಅವಧೂತನಾ ||ಪ||


ಪಾಪಗಳನೇ ಕಳೆವಾ ಪಾದ
ಪುಣ್ಯಕಾರ್ಯ ಪ್ರೇರಕ ಪಾದ
ಮುಕ್ಕೋಟಿ ದೇವತೆಗಳೂ ಸದಾ ಕಾಲ ನೆಲೆಸಿಹ ಪಾದ
ಆಗಮ ನಿಗಮಾಗಳೂ ಸ್ತುತಿಸಿ ಪಾಡಿಹ ಪಾದ
ಅಂತರಂಗದಾ ಭಕುತರಾ ಸದಾ ಕಾಯ್ವ ಪಾದ ||1||


ಚಿತ್ತಸುಖವ ನೀಡುವ ಪಾದ
ವಿತ್ತಭ್ರಾಂತಿ ಕಳೆವಾ ಪಾದ
ಅಚಿಂತ್ಯ ರೂಪನಾಗೀ ಆನಂದ ನೀಡುವ ಪಾದ
ಭಾವ ಶುದ್ಧಿಯಿಂದಾ ಭಜಿಸೇ ಭಾಗ್ಯವ ಕೊಡುವಾ  ಪಾದ
ಭವಸಾಗರವಾ ದಾಟಲು ನೌಕೆಯೊಂದೇ ಸದ್ಗುರು ಪಾದ ||2||


ತಮವನು ಕಳೆಯೋ ಪಾದ
ತನ್ಮಯತೆಯ ನೀಡುವ ಪಾದ
ತಂದೆತಾಯಿ ತಾನಾಗೀ ಸಲಹುತಿಹಾ ಗುರುವಿನ ಪಾದ
ಅಂಬಾಸುತನಾ ಐಶ್ವರ್ಯ ಈ ಶ್ರೀಪಾದ
ಸಖರಾಯಪುರವಾಸಿ ಗುರುನಾಥನಾ ಪಾದ ||3||

No comments:

Post a Comment