ಗುರುನಾಥ ಗಾನಾಮೃತ
ಮುದ್ದು ಮುಖದ ಗುರುರಾಯ ತಾನೆದ್ದು ಬರುತಾನೆ ನೋಡೇ
ರಚನೆ: ಅಂಬಾಸುತ
ಮುದ್ದು ಮುಖದ ಗುರುರಾಯ ತಾನೆದ್ದು ಬರುತಾನೆ ನೋಡೇ
ಬೃಂದಾವನದಿಂದಾ ತಾನೆದ್ದು ಬರುತಾನೆ ನೋಡೇ ||
ಇದ್ದ ಪಾಪಗಳಾ ತಾನಿಲ್ಲವಾಗಿಸೀ ಪುಣ್ಯದ ಹೊರೆಯಾ
ಭಕುತರ ಮೇಲಿರಿಸೇ ||
ಕಾಷಾಯಾಂಬರ ಧರಿಸದವನೂ
ದಂಡಕಮಂಡಲ ಪಿಡಿಯಾದವನೂ
ಮಠಮಾನ್ಯವ ಕಟ್ಟಿಸೀ ಪೀಠದಿ ಕೂರದವನೂ
ಸನ್ಯಾಸಿ ಎನಿಸದೇ ಮನಸನ್ಯಾಸ ಹೊಂದಿದಂಥಾ ||
ದಟ್ಟಿಯೊಂದನ್ನೂ ಸುತ್ತಿಕೊಂಡವನೂ
ಅತಿ ಸರಳತೆಗೇ ಸಾಕ್ಷಿ ಇವನೂ
ಕಷ್ಟವೆಂದು ಬಂದಾ ಭಕ್ತರ ಇಷ್ಟ ಪಾಲಿಸುವವನೂ
ಧರೆಯನುದ್ದರಿಸೇ ಬಂದಾ ದತ್ತಾವತಾರಿಯಾದಾ ||
ಧರೆಯೊಳುತ್ತಮವಾದಾ ಸಖರಾಯಪುರದೊಳು
ಸಾತ್ವಿಕರೂಪದೀ ನೆಲೆನಿಂಥಾ ಸದ್ಗುರೂ
ಅಂಬಾಸುತನಾ ಅನವರತ ಪೋಷಿಸುತಿಹಾ
ಶ್ರೀ ವೇಂಕಟಾಚಲನೆಂಬೋ ನಾಮವ ಧರಿಸಿಹಾ ||
No comments:
Post a Comment