ಒಟ್ಟು ನೋಟಗಳು

Tuesday, May 30, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 

ಅಧ್ಯಾಯ -20



ಸತಿಯ ಬ್ರಹ್ಮಪಿಶಾಚ ಬಾಧೆಯ । ಗತಿಗೆ ಹಚ್ಚುತ ಸ್ತ್ರೀಗೆ ಕೊಟ್ಟರು ।
ಸುತರ ಮರಣದಿ ಜ್ಞಾನವಿಪ್ಪತ್ತರಲಿ ಕೊಟ್ಟನಲಾ ।। 20  ।।

ಶಿರೋಳ ಎಂಬ ಊರಿನಲ್ಲಿ ಒಬ್ಬ ಗಂಡಹೆಂಡತಿಯರಿದ್ದರು. ನಿಷ್ಠಾವಂತರು. ಆದರೆ ಅವರ ಪೂರ್ವಜನ್ಮ ಪ್ರಾರಬ್ಧದಿಂದ ಹುಟ್ಟಿದ ಮಕ್ಕಳುಗಳೆಲ್ಲಾ ಸತ್ತು ಹೋಗುತ್ತಿದ್ದರು. ಜ್ಯೋತಿಷ್ಕರನ್ನು ಕೇಳಲಾಗಿ "ನಿನಗೆ ಬ್ರಹ್ಮರಾಕ್ಷಸನ ಬಾಧೆ ಇದೆ. ಪೂರ್ವಜನ್ಮದಲ್ಲಿ ನೀನು ಒಬ್ಬರಿಂದ ತೆಗೆದುಕೊಂಡ ಹಣ ಕೊಡದೆ ಆತನು ಆತ್ಮಹತ್ಯೆ ಮಾಡಿಕೊಂಡು ಪಿಶಾಚಿಯಾಗಿ ಈ ರೀತಿಯಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಅವನ ಹಣ ತೀರಿಸಲು ನಿನಗೆ ಅಸಾಧ್ಯ. ಹಾಗಾಗಿ, ಗುರುಸೇವೆಯಿಂದ ನಿನಗೆ ಅದರಿಂದ ಮುಕ್ತಿ ದೊರೆಯುತ್ತದೆ" ಎನ್ನುತ್ತಾರೆ. 

ಅದರಂತೆ ಗುರುಗಳ ಬಳಿ ಬಂದ ಆ ದಂಪತಿಗಳು ಅನನ್ಯ ಸೇವೆ ಮಾಡುತ್ತಾರೆ. ಗುರುಕೃಪೆಯಿಂದ ಜನಿಸಿದ ಮಗನು ದಿನದಿಂದ ದಿನಕ್ಕೆ ಬೆಳೆದು, ಆತನ ಚೌಲಕರ್ಮ ಮಾಡುವ ದಿನ ಬರುತ್ತದೆ. ಅತ್ಯಂತ ಸಂಭ್ರಮದಲ್ಲಿ ಇರುವಾಗ ಆ ಮಗುವು ಮರಣ ಹೊಂದುತ್ತದೆ. ಗುರುವಿನ ವರದಿಂದ ಪಡೆದ ಪುತ್ರನ ಈ ಸಾವಿಗಾಗಿ ಪರಿತಪಿಸಿ ಗುರುವಿನ ಬಳಿ ಬಂದಾಗ ಗುರುಗಳು ಈ ನಶ್ವರ ಸಂಬಂಧಗಳ ಬಗ್ಗೆ ಜ್ಞಾನ ಉಪದೇಶ ನೀಡುತ್ತಾರೆ. ಸಂಜೆಯಾದರೂ ಮೃತ ಮಗುವನ್ನು ಸಂಸ್ಕಾರಕ್ಕೆ ಅವಳು ನೀಡದಾಗ, ಊರಿನವರು ಬೆಳಿಗ್ಗೆ ಬರೋಣವೆಂದು ಹೊರಟು ಹೋಗುವ ವಿಚಾರವು ಇಪ್ಪತ್ತನೆಯ ಅಧ್ಯಾಯವಾಗಿದೆ. 

ಮುಂದುವರಿಯುವುದು...

No comments:

Post a Comment