ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 5
ವಿಶ್ವಪಾಲಕ ದತ್ತಮೂರ್ತಿ ಶಿಶುತ್ವ ಪಡೆದರು ಬ್ರಹ್ಮಕುಲದಲಿ ।
ಸಾತ್ವಿಕ ಶ್ರೀಪಾದರಾದರು ಪಂಚಮಾಧ್ಯಾಯ ।। 5 ।।
ಆಂಧ್ರಪ್ರದೇಶದ ಪೀಠಾಪುರದ ಸಾತ್ವಿಕ ದಂಪತಿಗಳಾದ, ಅಪ್ಪಲರಾಜಶರ್ಮ ಹಾಗೂ ಸುಮತಿಯವರ ಮನೆಯಲ್ಲಿ ಅಂದು ಪಿತೃಶ್ರಾದ್ಧವಿತ್ತು. ಬ್ರಾಹ್ಮಣ ಭೋಜನದ ಮೊದಲು ಯಾರಿಗೂ ಏನೂ ಕೊಡಕೂಡದು. ಅಂದು ದತ್ತಾತ್ರೇಯರು ಯತಿರೂಪ ಧರಿಸಿ ಭಿಕ್ಷೆಗೆ ಬಂದಾಗ ಸುಮತಿಯು ಬಂದ ಅತಿಥಿಗೆ ಭಿಕ್ಷೆ ನೀಡುತ್ತಾಳೆ. ಇವಳ ಭಕ್ತಿಗೆ ಸಂತೃಪ್ತನಾದ ಯತಿಯು "ತಾಯೇ, ನಿನಗೇನು ವರ ಬೇಕು ಕೇಳಿಕೊ" ಎಂದಾಗ.... "ನೀವು ತಾಯಿ ಎಂದಿದ್ದೀರಿ... ನಿಮ್ಮಂತಹ ಸತ್ಪುತ್ರನು ನನಗೆ ಜನಿಸಲಿ" ಎಂದು ಬೇಡುತ್ತಾಳೆ. ಯತಿಯು "ಹಾಗೇ ಆಗಲಿ. ಆದರೆ ಆತನಿಗೆ ಮದುವೆಯ ಬಂಧನ ತರಬೇಡಿ" ಎಂದು ಹೇಳುತ್ತಾರೆ. ನವಮಾಸ ತುಂಬಿದ ನಂತರ ಸುಮತಿ ರಾಣಿಗೆ ಮಗುವಾಗುತ್ತದೆ. ಅವರೇ ಕಾರಣಿಕ ಪುರುಷನಾದ ಶ್ರೀಪಾದರು. ದತ್ತಾತ್ರೇಯರ ಮೊದಲ ಅವತಾರ. ಮುಂದೆ ಉಪನಯನವಾಗಿ ಎಂಟನೆಯ ವರ್ಷದಲ್ಲಿ ನಾಲ್ಕು ವೇದಗಳನ್ನು ಉಚ್ಛರಿಸಿದರು. ಮದುವೆ ವಿಷಯ ಬಂದಾಗ ತಾಯಿಗೆ ಯತಿಗಳ ವಾಕ್ಯವನ್ನು ನೆನಪಿಸಿ ಸಾಧನೆಗಾಗಿ ಮನೆ ತೊರೆಯುವ ವಿಚಾರಗಳು ಐದನೆಯ ಅಧ್ಯಾಯವಾಗಿದೆ.
ಮುಂದುವರಿಯುವುದು.....
No comments:
Post a Comment