ಗುರುನಾಥ ಗಾನಾಮೃತ
ಸಖರಾಯಪುರವಾಸ ಸುಖ ನೀಡೋ ಮಹನೀಯಾ
ರಚನೆ: ಅಂಬಾಸುತ
ಸಖರಾಯಪುರವಾಸ ಸುಖ ನೀಡೋ ಮಹನೀಯಾ
ಗುರುನಾಥಾ ಗುರುನಾಥಾ ಅನಾಥ ನಾಥಾ ಆಪದ್ಭಾಂಧವ ಗುರುನಾಥಾ ಗುರುನಾಥಾ ಗುರುನಾಥಾ
ಗುರುನಾಥಾ ಗುರುನಾಥಾ||
ಸಖರಾಯಪುರವಾಸ ಸದ್ಗುರುನಾಥಾ
ಧರೆಯನುಧ್ಧರಿಸೆ ಬಂದಾ ಹೇ ಅವಧೂತಾ
ವೇಂಕಟಾಚಲನೆಂಬೋ ನಾಮವ ಧರಿಸೀ
ಶಿಷ್ಯರ ಚಿತ್ತಾಪಹಾರವ ಗೈದವಾ||
ಬದುಕುವದಾ ಕಲಿಸಿದಾ ಭಗವಂತಾ
ನಿನ್ನಾ ಸೇವೆಯಾ ನೀಡೋ ಧೀಮಂತಾ
ಸಕಲಚರಾಚರ ಚೇತನ ರೂಪಾ
ಸನ್ಮತಿದಾಯಕ ಜಗದಾ ಪ್ರದೀಪಾ ||
ಅಂಬಾಸುತನಾ ಅಂತರಂಗದೊಳಗಿದ್ದೂ
ಅನವರತ ಪೋಷಿಸುತಿಹ ಗುರುನಾಥಾ
ನಿನ್ನಡಿಯ ಪಿಡಿದೂ ಬೇಡುವೆ ಅವಧೂತಾ
ನಿನ್ನಾ ಸಾಮೀಪ್ಯದ ಸುಖ ನೀಡೋ ಗುರುನಾಥಾ ||
No comments:
Post a Comment