ಒಟ್ಟು ನೋಟಗಳು

Friday, May 26, 2017

ಗುರುನಾಥ ಗಾನಾಮೃತ 

ನೀ ನುಡಿದೆ ನಮ್ಮಲ್ಲಿ ಹೊಸರಾಗವ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ನೀ ನುಡಿದೆ ನಮ್ಮಲ್ಲಿ ಹೊಸರಾಗವ
ಶೃತಿಲಯವು ಕೂಡಿರುವ ನವಭಾವವ ||


ಪರಮ ಅದ್ವೈತದ ಪಲ್ಲವಿಯಲ್ಲಿ
ಚಿತ್ತಶುದ್ಧಿಯ ಚರಣದಲ್ಲಿ
ದೃಢಬಕುತಿಯ ತಾಳದಲ್ಲಿ
ಆತ್ಮಬೋಧೆಯ ಸಾರದಲ್ಲಿ  || 


ಹೃದಯಮುಟ್ಟುವ ಇಂಪಿನಲ್ಲಿ
ಮನದಲಿ ಬೆರೆಯುವ ಕಂಪಿನಲ್ಲಿ
ಅರಿವು ತೋರುವ ಭಾವದಲ್ಲಿ
ಕರ್ಮವು ಕರಗುವ ಗಾನದಲ್ಲಿ  ||


ಅಹಂಕಾರವು ಅಳಿಯುವ ರೀತಿಯಲ್ಲಿ
ಸರ್ವಸಮತ್ವದ ನುಡಿಗಳಲ್ಲಿ
ನಿರ್ಗುಣಪರಬ್ರಹ್ಮನ ನಿಜರೂಪದಲ್ಲಿ
ಜೀವನ್ಮುಕ್ತಿಯೆಂಬಾ ಸಾಧನೆಯಲ್ಲಿ ||

No comments:

Post a Comment