ಒಟ್ಟು ನೋಟಗಳು

Saturday, May 20, 2017

ಗುರುನಾಥ ಗಾನಾಮೃತ 

ನೀರ ಮೇಲಣ ಗುಳ್ಳೆಯಂತೀ ಬದುಕೂ 
ರಚನೆ: ಅಂಬಾಸುತ 


ನೀರ ಮೇಲಣ ಗುಳ್ಳೆಯಂತೀ ಬದುಕೂ
ಯಾವಾಗ ಒಡೆಯುವುದೋ ಅಂತ್ಯವ ಕಾಂಬುವುದೋ
ಅರಿಯದಾದೆನೋ ಗುರುವೇ ।। ಪ ।।

ಕಂದ ಕಣ್ಬಿಡುವ ಒಳಗೇ ಕಣ್ಮುಚ್ಚಿದಳು ತಾಯೀ
ಕಂದನಾ ಕುಂದೋ ಇದು ತಾಯ್ತನದ ಅಳಿವೋ ।। 1 ।।

ಹಸಿ ಮೈ ಬಿಸಿಯಾಗುವ ಮೊದಲೇ ವೈಧವ್ಯಾ
ಪತಿಯಾ ಪ್ರಾರಬ್ದವೋ ಇದು ಸತಿಯಾ ದೌರ್ಭಾಗ್ಯವೋ ।। 2 ।।

ಹೋಗಿ ಬರುವೆನೆಂದು ಹೋದ ಮಗ ಬಾರದಿದ್ದರೆ
ತಾಯಿಯ ಮರಣವೋ ಅದು ಮಗನಾ ಮರಣವೋ ।। 3 ।।

ಹಿಂದಿದ್ದುದು ಈಗ ಇಲ್ಲ ಈಗಿರುವುದು ಮುಂದೆ ಇಲ್ಲ
ಎಲ್ಲಾ ಮಾಯೆಯೋ ಇಲ್ಲಾ ಅವನ ಲೀಲೆಯೋ ।। 4 ।।

No comments:

Post a Comment