ಗುರುನಾಥ ಗಾನಾಮೃತ
ಚಿನ್ಮಯ ಭಾವವ ನೀಡಲು ಬಾರೋ
ರಚನೆ: ಅಂಬಾಸುತ
ಚಿನ್ಮಯ ಭಾವವ ನೀಡಲು ಬಾರೋ
ಗುರುವರಾ ಹೇ ಗುರುವರಾ||
ಚಿತ್ತವ ನಿನಗೇ ಅರ್ಪಿಸುವೇ
ಚಂಚಲತೆಯಾ ನಾ ತೊರೆವೇ ||
ಸಜ್ಜನ ಸಹವಾಸ ನೀಡುತಲಿ
ಸ್ವಾನಂದಾಮೃತ ಸುರಿಸುತಲೀ
ಸೋಹಂಭಾವವ ತುಂಬುತಲೀ
ಬಾರಯ್ಯ ಗುರುವರ ಹರಸುತಲೀ ||
ಕಾಮಕ್ರೋಧವ ಅಳಿಸುತಲೀ
ಕರುಣಾಮೃತವಾ ಹರಿಸುತಲೀ
ಆತ್ಮ ಜ್ಯೋತಿಯ ಬೆಳಗುತಲೀ
ಬಾರಯ್ಯ ಗುರುವರ ಹರಸುತಲೀ ||
ಬಾ ಬಾ ಬಾ ಬಾ ಗುರುವರಾ
ತಾ ತಾ ತಾ ತಾ ನಿಜವರಾ
ನಾ ನಾ ನಾ ನಾ ನಿನ್ನಾ ದಾಸಾ
ನೀ ನೀ ನೀ ನೀ ಜಗದೀಶಾ ||
No comments:
Post a Comment